ಮಂಗಳೂರು: ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ- Pumpwell Suicide

ಮಂಗಳೂರು: ಮಂಗಳೂರಿನ ಪಂಪ್‌ವೆಲ್ ಬಳಿ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಇರುವ ಖಾಸಗಿ ಲಾಡ್ಜ್‌ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಲಾಡ್ಜ್‌ನ 129ನೇ ನಂಬ್ರದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಕೇರಳ ಕಾಸರಗೋಡಿನ ಉಪ್ಪಳದ ಚಿಪ್ಪಾರು ನಿವಾಸಿ 55ರ ಹರೆಯದ ಅಬ್ದುಲ್‌ ಕರೀಂ ಎಂದು ಗುರುತಿಸಲಾಗಿದೆ.

ಮೃತ ವ್ಯಕ್ತಿ ಸಂಪೂರ್ಣವಾಗಿ ಬೆತ್ತಲಾಗಿ ಬಿದ್ದಿರುವುದು ನಿಗೂಢವಾಗಿದೆ. ಸಾವಿಗೆ ಕಾರಣ ಏನು ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ಅನುಮಾನಾಸ್ಪದ, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸಲಿದ್ದೇವೆ ಎಂದು ಕಮಿಷನರ್ ಹೇಳಿದ್ದಾರೆ.

ಇಲ್ಲಿ ದಾಖಲಾದ ಸಿಸಿಟಿವಿ ಫೂಟೇಜ್ ವಶಕ್ಕೆ ತೆಗೆದುಕೊಳ್ಳಲಿದ್ದೇವೆ. ಅಬ್ದುಲ್ ಕರೀಂನನ್ನು ಮಹಿಳೆ ಮತ್ತು ಒಬ್ಬ ವ್ಯಕ್ತಿ ಸಂಪರ್ಕಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

Related Posts

Leave a Reply

Your email address will not be published.