ಡಿಸೇಲ್ ಬೆಲೆ ಏರಿಕೆಯಿಂದ ಲಾರಿ ಉದ್ಯಮಕ್ಕೆ ಸಂಕಷ್ಟ

ಮಂಗಳೂರು : ರಾಜ್ಯ ಸರಕಾರ ಡಿಸೇಲ್ ಬೆಲೆ ಏರಿಸಿರುವುದರಿಂದ ಲಾರಿ ಉದ್ಯಮಕ್ಕೆ ಅತ್ಯಂತ ಹೆಚ್ಚು ನಷ್ಟವಾಗಲಿದ್ದು, ಮಾಲಕರು ಸಂಕಷ್ಟಕ್ಕೆ ಒಳಗಾಗುತ್ತಾರೆ’ ಎಂದು ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಹೇಳಿದ್ದಾರೆ.

ಡಿಸೇಲ್ ಬೆಲೆ ಏರಿಕೆಯಾದರೂ ಲಾರಿ ಬಾಡಿಗೆ ದರ ಏರಿಸಲಾಗುತ್ತಿಲ್ಲ. ಸರಕಾರ ಸ್ವಾಮ್ಯದ ಬಂದರು, ಕಚ್ಚಾ ತೈಲ, ಆಹಾರ ಸಾಮಾಗ್ರಿ ಸರಕು ನಿರ್ವಹಣೆಗೆ ಬಳಸಲಾಗುವ ಲಾರಿಗಳ ಬಾಡಿಗೆಯನ್ನು ಸರಕಾರ ನಿಯಂತ್ರಿಸುತ್ತಿಲ್ಲ. ಲಾರಿಗಳಿಗೆ ಟನ್ / ಕಿ.ಮೀ. ಲೆಕ್ಕದಲ್ಲಿ ಸರಕಾರ ನಿಗದಿತ ದರ ಕಡ್ಡಾಯಗೊಳಿಸಬೇಕಿದೆ’ ಎಂದು ಆಗ್ರಹಿಸಿದ್ದಾರೆ.

ಮಂಗಳೂರು ಬಂಧನದಿಂದಕಲ್ಲಿದ್ದಲು ಕಲಬೆರಕೆ ಹಾಗೂ ಅಕ್ರಮ ಸಾಗಾಟದ ಆರೋಪಗಳು ಕೇಳಿ ಬರುತ್ತಿದ್ದು ಇದರಿಂದ ಲಾರಿ ಮಾಲಕರಿಗೆ ಪ್ಯಾಕ್ಟರಿಗಳಲ್ಲಿ ಸಮಯ ನಷ್ಟದ ಜೊತೆಗೆ ಅನುಮಾನದಿಂದ ನೋಡುವಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದಿದ್ದಾರೆ.

ಮಂಗಳೂರು ಬಂದರು ಪ್ರದೇಶದಲ್ಲಿ ಸುಸಜ್ಜಿತ, ಸುರಕ್ಷಿತ ಲಾರಿ ಪಾರ್ಕಿಂಗ್ ಗೆ ಬಹಳ ಸಮಯದಿಂದ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದು, ಇದೀಗ ಲಾರಿಗಳ ಟಯರ್, ಬ್ಯಾಟರಿ ಕಳ್ಳತನ ಅಧಿಕಗೊಂಡಿದೆ. ಫೈನಾನ್ಸ್ ಕಂಪನಿಗಳಿಂದ ಲಾರಿ ಮಾಲಕರಿಗೆ ನಿರಂತರ ಕಿರುಕುಳ, ವಿಮಾ ಕಂಪನಿಗಳ ನಿಯಮ ಉಲ್ಲಂಘನೆ, ಡೀಲರ್ ಹಾಗೂ ಲಾರಿ ಉತ್ಪಾದಕರಿಂದ ನಾನಾ ವಿಧ ಹಣ ವಸೂಲಿ, 28% ಜಿಎಸ್ಟಿ, ಅಧಿಕ ಟೋಲ್ ಶುಲ್ಕದ ಭಾರ, ಹಾಲ್ಟಿಂಗ್ ಬಾಡಿಗೆಗೆ ನಿಯಮವಿಲ್ಲದಿರುವುದು ಲಾರಿ ಮಾಲಕರನ್ನು ಚಿಂತೆಗೀಡು ಮಾಡಿದೆ’

ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಬಾರಿ ಪ್ರತಿಭಟನೆ ಹಾಗೂ ಮುಷ್ಕರ ಮಾಡಿದ್ದೇವೆ. ಇನ್ನು ಕೂಡಾ ಸರಕಾರ, ಜಿಲ್ಲಾಡಳಿತ ಎಚ್ಚೆತ್ತುಕೊಳ್ಳದಿದ್ದಲ್ಲಿ ತೀವ್ರವಾಗಿ ಅನಿರ್ದಿಷ್ಟವಧಿ ಲಾರಿ ಮುಷ್ಕರ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

add - tandoor .

Related Posts

Leave a Reply

Your email address will not be published.