HomeFresh Newsಗುಹೆಯೊಳಕ್ಕೆ ನುಗ್ಗಿದ ನೀರು | ಕಲ್ಲಿನ ಮೇಲೆ ಕುಳಿತ ಐವರು | ಇನ್ನೇನಾದರು ಆ ಇಬ್ಬರು?

ಗುಹೆಯೊಳಕ್ಕೆ ನುಗ್ಗಿದ ನೀರು | ಕಲ್ಲಿನ ಮೇಲೆ ಕುಳಿತ ಐವರು | ಇನ್ನೇನಾದರು ಆ ಇಬ್ಬರು?

ಲಾವೋಸ್‌ನ ವಿಯೆಂಟೈನ್‌ನಲ್ಲಿ ನೀರು ನುಗ್ಗಿದ್ದರಿಂದ ಗುಹೆಯೊಳಕ್ಕೆ ಸಿಕ್ಕಿ ಬಿದ್ದಿದ್ದ ಏಳು ಮಂದಿಯಲ್ಲಿ ಐವರು ಬಂಡೆಯೊಂದರ ಮೇಲೆ ಕುಳಿತಿರುವುದು ಪತ್ತೆಯಾಗಿದೆ; ರಕ್ಷಣೆ ಸಾಗಿದೆ.


ಕ್ರೈಸಂಬೌನ್ ಪ್ರಾಂತ್ಯದ ದೊಡ್ಡ ಗುಹೆಯೊಳಕ್ಕೆ ಗ್ರಾಮದ ಏಳು ಮಂದಿ ಪ್ರವೇಶಿಸಿದ್ದರು. ದೊಡ್ಡ ಗುಹೆಯಲ್ಲಿ ಅವರು ದೂರ ಸಾಗಿದ್ದಾಗ ಒಂದೇ ಸಮನೆ ಕೊಡಸುರಿ ಮಳೆ ಬಂದು ಗುಹೆಗೆ ನೀರು ನುಗ್ಗಿದೆ ಹಾಗೂ ಗುಹೆಯ ಬಾಗಿಲನ್ನು ನೀರು ತುಂಬಿಕೊಂಡಿದೆ.

ರಕ್ಷಣಾ ಕಾರ್ಯಾಚರಣೆಯಂತೆ ಮುಳುಗುಗಾರರು ಗುಹೆಯಲ್ಲಿ ಮುಳುಗಿ ಇಣುಕಿದಾಗ ಗುಹೆಯ ದೂರದ ಬಂಡೆಯೊಂದರ ಮೇಲೆ ಐದು ಮಂದಿ ಬದುಕಿ ಕುಳಿತಿರುವುದು ಕಂಡುಬಂದಿದೆ.

ಇನ್ನಿಬ್ಬರು ಏನಾದರು ಎಂಬ ಬಗೆಗೆ ಏನೂ ತಿಳಿದು ಬಂದಿಲ್ಲ. ಮುಳುಗು ತಜ್ಞರು ರಕ್ಷಣಾ ಪಡೆಯೊಡನೆ ಕಾರ್ಯ ನಿರತವಾಗಿದ್ದು, ಕಲ್ಲಿನ ಮೇಲೆ ಕುಳಿತವರ ರಕ್ಷಣೆ ಕೈಗೆಟಕುವಂತಿದೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments