HomeFresh Newsಶಿವಪಾಡಿಗೆ ಬಂದರು 100 ವರ್ಷದ ಶಿವಮ್ಮ : ಅತಿರುದ್ರ ಮಹಾಯಾಗಕ್ಕೆ ತಾಯಿ - ಮಗನ ಆಗಮನ

ಶಿವಪಾಡಿಗೆ ಬಂದರು 100 ವರ್ಷದ ಶಿವಮ್ಮ : ಅತಿರುದ್ರ ಮಹಾಯಾಗಕ್ಕೆ ತಾಯಿ – ಮಗನ ಆಗಮನ

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಏಳನೇ ದಿನ ಫೆಬ್ರವರಿ 28, 2023 ರ ಮಂಗಳವಾರದಂದು, ಮುಂಜಾನೆ ಸಮಯದಲ್ಲಿ ತುಮಕೂರು ಜಿಲ್ಲೆಯ ತಿಮ್ಮಲಾಪುರದಿಂದ ಉಡುಪಿಗೆ ಆಗಮಿಸಿದ 100 ವರ್ಷದ ಶಿವಮ್ಮ ಮತ್ತು ಅವರ ಮಗ ಶಿವರುದ್ರಯ್ಯ, ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗಕ್ಕೆ ಬಂದಿರುವುದು ವಿಶೇಷವಾಗಿದೆ. ಶಿವಮ್ಮ, ತಮ್ಮ ಇಳಿ ವಯಸ್ಸಿನಲ್ಲೂ ಅತಿರುದ್ರ ಮಹಾಯಾಗವನ್ನು ಕಾಣುವ ಹಂಬಲವನ್ನು ಇಟ್ಟುಕೊಂಡು ಶಿವಪಾಡಿಯ ಉಮಾಮಹೇಶ್ವರ ಸನ್ನಿಧಿಗೆ ಆಗಮಿಸಿರುವುದು ಎಲ್ಲರ ಗಮನ ಸೆಳೆದಿದೆ.

ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರು ಶಾಸಕ ಕೆ. ರಘುಪತಿ ಭಟ್ ಮತ್ತು ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ಶಿವಮ್ಮ ಅವರನ್ನು ಸತ್ಕರಿಸಿ ಆಶೀರ್ವಾದವನ್ನು ಪಡೆದರು. ಶಿವಮ್ಮ ಮತ್ತು ಅವರ ಮಗ ಶಿವರುದ್ರಯ್ಯ ಅವರು ಶ್ರೀ ಉಮಾಮಹೇಶ್ವರ ದೇವರ ಆಶೀರ್ವಾದವನ್ನು ಪಡೆದು, ಅತಿರುದ್ರ ಮಹಾಯಾಗದಲ್ಲಿ ಪಾಲ್ಗೊಂಡರು. ಅತಿರುದ್ರ ಮಹಾಯಾಗ ಸಮಿತಿ ಮತ್ತು ದೇವಸ್ಥಾನದ ಪ್ರಮುಖರು, ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ಕೂಡ ಶಿವಮ್ಮ ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದರು. ಬೆಳಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ದೇವಸ್ಥಾನದ ಪ್ರಾಂಗಣದಲ್ಲಿ ಋತ್ವಿಜರಿಂದ ಸಪ್ತಶತೀ ಪಾರಾಯಣ, ಶ್ರೀ ಭಾಗ್ಯಸೂಕ್ತ ಹೋಮ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments