ಬಾಲ ನಟಿ ದೀಕ್ಷಾ ಡಿ ರೈ ಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ..!

ಪೆನ್ಸಿಲ್ ಬಾಕ್ಸ್. ಹಸೆರೇ ಹೇಳುವಂತೆ ಇದು ಮಕ್ಕಳ ಕನ್ನಡ ಸಿನಿಮಾ. ಬಹುತೇಕ ಕರಾವಳಿ ಪ್ರತಿಭೆಗಳೇ ಸೇರಿ ಮಾಡಿರುವ ಮೂವಿ. ದೃಶ್ಯ ಮೂವೀಸ್ ಬ್ಯಾನರಿನಡಿಯಲ್ಲಿ ಉದ್ಯಮಿ ದಯಾನಂದ ಎಸ್ ರೈ ಅವರ ನಿರ್ಮಾಣದಲ್ಲಿ ತಯಾರಾದ ಮಕ್ಕಳ ಕಥಾನಕವನ್ನೊಳಗೊಂಡ ಸದಭಿರುಚಿಯ ಮನರಂಜನೆಯ ‘ಪೆನ್ಸಿಲ್ ಬಾಕ್ಸ್’ ಚಿತ್ರ ಕರಾವಳಿಯಾದ್ಯಂತ ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡಿ ಹಿಟ್ ಆಗಿತ್ತು. ಇದೀಗ ಚಿತ್ರದ ಬಾಲ ನಟಿ ದೀಕ್ಷಾ ಡಿ ರೈಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ಲಭಿಸಿದೆ. ಹೌದು. ಅಪ್ಪು ಮಕ್ಕಳ ಇಂಟರ್‌ನ್ಯಾಷನಲ್ ಚಲನಚಿತ್ರೋತ್ಸವ ಬೆಂಗಳೂರು ಇದರಲ್ಲಿ ಪ್ರದರ್ಶನಗೊಂಡ ಪೆನ್ಸಿಲ್ ಬಾಕ್ಸ್ ಚಲನಚಿತ್ರದ ಅಭಿನಯಕ್ಕಾಗಿ ದೀಕ್ಷಾಗೆ ಈ ಪ್ರಶಸ್ತಿ ಲಭಿಸಿದೆ.