ದರ್ಶನ್ ವಕೀಲ ನಾಲಾಯಕ್ ಎಂದ ಶಾಸಕ ಭೋಜೇಗೌಡ

ವಕೀಲರು ತನ್ನ ಕಕ್ಷಿದಾರನನ್ನು ಕೋರ್ಟಿನಲ್ಲಿ ಸಮರ್ಥಿಸಿಕೊಳ್ಳಬೇಕು, ಬೀದಿಯಲ್ಲಿ ಅಲ್ಲ, ಆತ ವಕೀಲ ಆಗಿರಲು ಅನ್‌ಫಿಟ್ ಎಂದು ಮೇಲ್ಮನೆ ಸದಸ್ಯ ಎಸ್. ಎಲ್. ಭೋಜೇಗೌಡ ಅವರು ದರ್ಶನ್ ವಕೀಲನ ಬಗೆಗೆ ಹೇಳಿದರು.

ಚಿಕ್ಕಮಗಳೂರಿನಲ್ಲಿ ಅವರು ಪತ್ರಿಕಾಗೊಟ್ಟಿ ನಡೆಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾಗಿ ಎರಡನೆಯ ಬಾರಿ ಆಯ್ಕೆಯಾಗಿರುವ ಭೋಜೇಗೌಡರು ಬಾರ್ ಕೌನ್ಸಿಲ್‌ನ ಮಾಜೀ ಉಪಾಧ್ಯಕ್ಷರೂ ಆಗಿದ್ದವರು.

darshan

ಗಾಂಧೀಜಿಯವರನ್ನು ಕೊಂದ ಗೋಡ್ಸೆ, ಇಂದಿರಾ ಗಾಂಧಿ ಹಂತಕರಿಗೂ ವಕೀಲರಿದ್ದರು. ಕೊಲೆ ಆರೋಪಿ ದರ್ಶನ್‌ಗೂ ವಕೀಲರು ಇರಬೇಕು. ಅವರು ಕೋರ್ಟಿನಲ್ಲಿ ತಮ್ಮ ಕಕ್ಷಿದಾರನನ್ನು ಸಮರ್ಥಿಸಿ ವಾದ ಮಂಡಿಸಬೇಕು. ರಸ್ತೆಯಲ್ಲಿ, ಮಾಧ್ಯಮದ ಎದುರು ನನ್ನ ಕಕ್ಷಿದಾರ ನಿರಪರಾಧಿ ಎಂದು ನೂರು ಸಲ ಹೇಳುವುದಲ್ಲ ಎಂದು ಭೋಜೇಗೌಡರು ಹೆಸರು ಹೇಳದೆಯೇ ದರ್ಶನ್ ಪರ ವಕೀಲರನ್ನು ಟೀಕಿಸಿದರು.ಅವನು ಲಾಯರ್ ಆಗಿರಲು ನಾಲಾಯಕ್. ಬಾರ್ ಕೌನ್ಸಿಲ್‌ನಿಂದ ಅವನಿಗೆ ನೋಟೀಸು ಕೊಡಿಸುತ್ತೇನೆ ಎಂದೂ ಅವರು ಹೇಳಿದರು.

add - tandoor .

Related Posts

Leave a Reply

Your email address will not be published.