HomeFresh Newsಅಂತರರಾಷ್ಟ್ರೀಯ ನಿಯಮಾವಳಿ ಮುರಿದ ಯುದ್ಧ: ಸ್ಪೆಯಿನ್ ಅಧ್ಯಕ್ಷ ಖಂಡನೆ

ಅಂತರರಾಷ್ಟ್ರೀಯ ನಿಯಮಾವಳಿ ಮುರಿದ ಯುದ್ಧ: ಸ್ಪೆಯಿನ್ ಅಧ್ಯಕ್ಷ ಖಂಡನೆ

ಅಮೆರಿಕದ ದುಸ್ಸಾಹಸದ, ಅಂತರರಾಷ್ಟ್ರೀಯ ನಿಯಮಾವಳಿ ಮುರಿದ ಯುದ್ಧ ಎಂದು ಇರಾನ್ ಮೇಲಿನ ದಾಳಿಯನ್ನು ಸ್ಪೆಯಿನ್ ಅಧ್ಯಕ್ಷ ಮಸೌದ್ ಪೆಜಿಸ್ಕಿಯಾನ್ ಹೇಳಿದ್ದಾರೆ.


ಇರಾನ್ ಮೇಲೆ ಇಸ್ರೇಲ್ ಜೊತೆಗೆ ಸೇರಿ ಯುಎಸ್‌ಎ ನಡೆಸುತ್ತಿರುವ ಯುದ್ಧವು ಮಾನವ ಹಕ್ಕುಗಳ ಉಲ್ಲಂಘನೆ ಹಾಗು ಮಿಲಿಟರಿಯ ಆಕ್ರಮಣವಾಗಿದೆ ಎಂದು ಸ್ಪೆಯಿನ್ ಅಧ್ಯಕ್ಷರಾದ ಪೆಜಿಸ್ಕಿಯಾನ್ ಹೇಳಿದ್ದಾರೆ. ಪಶ್ಚಿಮದ ದೇಶಗಳಲ್ಲಿ ಇನ್ನೂ ನೈತಿಕತೆ ಹಾಗೂ ಆತ್ಮಸಾಕ್ಷಿ ಉಳಿದಿದೆ. ಅಮೆರಿಕ ಸಂಯುಕ್ತ ಸಂಸ್ಥಾನವು ಅದನ್ನೆಲ್ಲ ಮೀರಿ ನಡೆದಿದೆ. ಜಿಯೋನಿಸ್ಟ್ ಅಮೆರಿಕದ ಜಂಟಿ ಹೋರಾಟವು ಯಾವುದೇ ಲೋಕ ನೀತಿಯನ್ನು ಅನುಸರಿಸುತ್ತಿಲ್ಲ ಎಂದು ಅವರು ಖಂಡಿಸಿದ್ದಾರೆ. ಸ್ಪೆಯಿನ್ ಎಂದಿಗೂ ಇರಾನ್ ಮೇಲೆ ದಾಳಿಗೆ ಯುಎಸ್‌ಎಗೆ ತನ್ನ ನೆಲೆ ನೀಡುವುದಿಲ್ಲ ಎಂದೂ ಅವರು ಹೇಳಿದ್ದಾರೆ.

Smoke billows after an Israeli strike on Beirut’s southern suburbs, following an escalation between Hezbollah and Israel amid the U.S.-Israeli conflict with Iran, Lebanon, March 2, 2026. REUTERS/Mohamed Azakir TPX IMAGES OF THE DAY


ಸ್ಪೆಯಿನ್ ತನ್ನ ನೆಲೆಗಳನ್ನು ನನಗೆ ಯುದ್ಧಕ್ಕೆ ಬಳಸಲು ನೀಡದಿದ್ದಲ್ಲಿ ಸ್ಪೆಯಿನ್ ಜೊತೆಗಿನ ವ್ಯಾಪಾರ ಒಪ್ಪಂದವನ್ನು ರದ್ದು ಪಡಿಸುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಪೆಯಿನ್ ಪ್ರಧಾನಿ ಪೆಡ್ರೋ ಸ್ಯಾಂಚೆಜ್ ಅವರು, ನಾವು ಲಕ್ಷಾಂತರ ಜನರ ಪ್ರಾಣಗಳೊಂದಿಗೆ ಜೂಜಾಟವಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಸ್ಪೆಯಿನ್ ಸರಕಾರವು ಟ್ರಂಪ್‌ರ ಯಾವುದೇ ಯುದ್ಧ ಸಂಬಂಧಿ ಹೇಳಿಕೆಗೆ ಬದ್ಧವಲ್ಲ ಎಂದು ಕೂಡ ಹೇಳಿಕೆ ನೀಡಲಾಗಿದೆ.


ಇರಾನ್ ಮೇಲೆ ಯುಎಸ್‌ಎಯ ಜಂಟಿ ದಾಳಿಯು ಎಲ್ಲ ಅಂತರರಾಷ್ಟ್ರೀಯ ಕಾನೂನು ನಿಯಮಮಾವಳಿಗಳನ್ನು ಮುರಿದ ಕೃತ್ಯವಾಗಿದೆ ಎಂದು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments