HomeFresh Newsದಕ್ಷಿಣ ಅಮೆರಿಕ ಮೂಲದ ಟ್ಯಾಮರಿಲ್ಲೊ ಹಣ್ಣು

ದಕ್ಷಿಣ ಅಮೆರಿಕ ಮೂಲದ ಟ್ಯಾಮರಿಲ್ಲೊ ಹಣ್ಣು

ಟ್ರೀ ಟೊಮ್ಯಾಟೊ ಎಂದೂ ಹೇಳಲಾಗುವ ಟ್ಯಾಮರಿಲ್ಲೊ ಹಣ್ಣು ದಕ್ಷಿಣ ಅಮೆರಿಕ ಮೂಲದ್ದು, ಗಾಲಪಾಗೋಸ್ ದ್ವೀಪದವರೆಗೂ ಕಂಡು ಬರುತ್ತದೆ.

ಮುಖ್ಯವಾಗಿ ತೆಂಕಣ ಅಮೆರಿಕದ ಆಂಡೀಸ್ ಪರ್ವತ ಶ್ರೇಣಿ ಇದರ ಮೂಲ ನೆಲೆ. ಸಮಶೀತೋಷ್ಣ ವಲಯ ಹಾಗೂ ಪರ್ವತದ ತಪ್ಪಲಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಟ್ರೀ ಟೊಮ್ಯಾಟೊ ಎನ್ನಲಾಗಿದ್ದರೂ ಇದು ಪೊದೆ ಸಸ್ಯದ ಫಲ; ಮರಿ ಮರದ ಹಣ್ಣು ಎಂದು ಬೇಕಾದರೆ ಹೇಳಬಹುದು.

ತೆಂಕಣ ಅಮೆರಿಕದ ಎಲ್ಲ ದೇಶಗಳಲ್ಲಿ ಬೆಳೆದರೂ ಜಗತ್ತಿನಲ್ಲಿ ಹೆಚ್ಚು ಬೆಳೆಯುವ ದೇಶ ಕೊಲಂಬಿಯಾ; ವರುಷಾ ವರುಷ ೧,೫೦,೦೦೦ ಟನ್ ಮೀರಿ ಬೆಳೆಯುತ್ತಾರೆ. ನ್ಯೂಜಿಲ್ಯಾಂಡ್, ನೇಪಾಳ, ರುವಾಂಡಾ, ಬುರುಂಡಿ, ಕಾಂಗೋ, ಆಸ್ಟ್ರೇಲಿಯಾ, ಚೀನಾ ಎಂದೆಲ್ಲ ಒಂದಷ್ಟು ಬೆಳೆಯುವರು.

ನಾಗಾಲ್ಯಾಂಡಿನಲ್ಲಿ ಇದನ್ನು ನಾಗಾ ಟ್ರೀ ಟೊಮ್ಯಾಟೊ ಎನ್ನುವರು. ಇದರ ಒಳ ತಿರುಳು ಹುಳಿ; ನೀರು, ಸಕ್ಕರೆ ಸೇರಿಸಿದರೆ ಒಳ್ಳೆಯ ಪಾನಕ ಆಗುತ್ತದೆ. ಟೊಮ್ಯಾಟೊ ಯಾವುದಕ್ಕೆಲ್ಲ ಬಳಸುತ್ತಾರೋ ಅದೇ ರೀತಿ ಈ ಟ್ಯಾಮರಿಲ್ಲೊ ಬಳಸಬಹುದು.

ಪ್ರೋಟೀನ್, ನಾರುಸತ್ವ, ಕೊಬ್ಬು ಸತ್ವ, ಜೀವಸತ್ವ ಹೊಂದಿರುವ ಹಣ್ಣು ಇದು. ಚೀನಾದಲ್ಲಿ ಇದರ ಸಾಸ್ ಪ್ರಸಿದ್ಧ. ಬೇಕರಿ ಟಾಪ್ ಆಗಿ ಹಲವೆಡೆ ಬಳಸುತ್ತಾರೆ. ಇದರಲ್ಲಿನ ಪೆಕ್ಟಿನ್ ಅಂಶ ಕೈಗಾರಿಕೆಗಳಲ್ಲಿ ಬಳಕೆಯಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments