HomeUncategorizedರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ನೇಮಕ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೆಲವು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.


ಹೊಸ ರಾಜ್ಯಪಾಲರುಗಳ ನೇಮಕದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿ. ವಿ. ಆನಂದ ಬೋಸ್ ಅವರು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನದ ಜವಾಬುದಾರಿಯನ್ನು ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿಯವರಿಗೆ ವಹಿಸಲಾಗಿದೆ. ಒಳಾಡಳಿತ ಮಂತ್ರಿ ಅಮಿತ್ ಶಾ ಅವರು ಒತ್ತಡ ಹೇರಿ ಬೋಸ್‌ರಿಂದ ರಾಜೀನಾಮೆ ಕೊಡಿಸಿದ್ದಾರೆ. ತಮ್ಮ ಒಳ ಹೊಳವು ಜಾರಿಗೆ ರವಿಯವರನ್ನು ತಂದಿದ್ದಾರೆ ಎಂದು ವೆಸ್ಟ್ ಬೆಂಗಾಲ್ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಆಪಾದನೆ ಮಾಡಿದ್ದಾರೆ. ಚುನಾಯಿತ ಸರಕಾರದೊಡನೆ ಸಹಕರಿಸದ ಆಪಾದನೆ ರಾಜ್ಯಪಾಲ ಆರ್. ಎನ್. ರವಿಯವರ ಮೇಲೆ ಇದೆ.


ತೆಲಂಗಾಣದ ರಾಜ್ಯಪಾಲರಾದ ಜಿಷ್ಣುದೇವ್ ವರ್ಮಾರನ್ನು ಮಹಾರಾಷ್ಟ್ರದ ರಾಜ್ಯಪಾಲರಾಗಿ ವರ್ಗಾಯಿಸಲಾಗಿದೆ. ಹಿಮಾಚಲದ ರಾಜ್ಯಪಾಲರಾದ ಶಿವ ಪ್ರತಾಪ್ ಶುಕ್ಲಾ ಅವರನ್ನು ತೆಲಂಗಾಣದ ರಾಜ್ಯಪಾಲರಾಗಿ ಮಾಡಲಾಗಿದೆ. ಬಿಹಾರದ ಮಾಜೀ ಮಂತ್ರಿ ನಂದ ಕಿಶೋರ್ ಯಾದವ್ ಅವರನ್ನು ನಾಗಾಲ್ಯಾಂಡಿಗೆ, ನಿವೃತ್ತ ಲೆಫ್ಟಿನೆಂಟ್ ಜನರಲ್ ಸಯ್ಯದ್ ಅತಾ ಹುಸೇನ್ ಅವರನ್ನು ಬಿಹಾರದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಕೇರಳದ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್‌ರಿಗೆ ತಮಿಳುನಾಡಿನ ಹೊಣೆ ಹೊರಿಸಲಾಗಿದೆ. ಲಡಾಖಿನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಸಲಾಗಿದೆ. ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾರನ್ನು ಲಡಾಖ್‌ಗೆ ಕಳುಹಿಸಲಾಗಿದೆ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದವರಾದ ತರಂಜಿತ್ ಸಿಂಗ್ ಸಂಧು ಅವರನ್ನು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments