ಮತಾಂತರ ತಿದ್ದುಪಡಿ ಕಾಯ್ದೆ ರದ್ದು ವಿಚಾರ ಖಂಡನೀಯ : ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಕಿಡಿ

ಮಂಗಳೂರು: ಕಾಂಗ್ರೆಸ್ ಸರಕಾರ ಮತಾಂತರ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಲು ಹೊರಟಿರುವ ನಿರ್ಧಾರ ಖಂಡನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಹೇಳಿದರು.
ಅವರು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡುವ ಮೂಲಕ ದಳ್ಳಾಲಿಗಳಿಗೆ ಉತ್ತೇಜನ ನೀಡುವ, ಏಜೆಂಟರಿಗೆ ಅವಕಾಶ ಮಾಡಿಕೊಡುವ ಅವಕಾಶ ಕರ್ನಾಟಕ ರೈತರಿಗೆ ಮಾಡಿದ ಮೋಸವಾಗಿದೆ.
ಪಠ್ಯಪುಸ್ತಕ ಪರಿಷ್ಕರಣೆ ಸ್ವಾತಂತ್ರ್ಯ ಬಂದ ಕೂಡಲೇ ಆಗಬೇಕಾಗಿತ್ತು. ಆದರೆ ನಿಜವಾದ ಇತಿಹಾಸವನ್ನು ದೇಶದ ಜನರಿಗೆ ತಿಳಿಸದೇ, ಸುಳ್ಳು ಇತಿಹಾಸವನ್ನು ಜನತೆಗೆ ತಿಳಿಸಿದೆ ಇದು ಖಂಡನೀಯವಾಗಿದೆ ಎಂದರು.
ಈ ಎಲ್ಲಾ ವಿಚಾರಗಳ ಬಗ್ಗೆ ಜೂನ್ 19ರಂದು ರಾಜ್ಯಮಟ್ಟದಲ್ಲಿ ಸಭೆ ನಡೆದ ಬಳಿಕ ನಾವು ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
