HomeFresh Newsಸುಳ್ಯ: ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ

ಸುಳ್ಯ: ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಸುಳ್ಯ ತಾಲೂಕು,ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಸುಳ್ಯ ತಾಲೂಕಿನ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ಲಯನ್ಸ್ ಕ್ಲಬ್ ಸಭಾಭವನ ಸುಳ್ಯದಲ್ಲಿ ನಡೆಸಲಾಯಿತು.

ತರಬೇತಿ ಕಾರ್ಯಗಾರದ ಉದ್ಘಾಟನೆಯನ್ನು ಶ್ರೀ ರಾಜಣ್ಣ, ಕಾರ್ಯನಿರ್ವಾಹಕ ಅಧಿಕಾರಿಗಳು,ತಾಲೂಕು ಪಂಚಾಯತ್ ಸುಳ್ಯ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಯಾವುದೇ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶೌರ್ಯ ಸ್ವಯಂ ಸೇವಕರಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಶ್ರೀ ವಿವೇಕ್ ವಿ ಪಾಯಸ್, ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರು ಪೂಜ್ಯರ ಮಾರ್ಗದರ್ಶನದ ಶೌರ್ಯ ಕಾರ್ಯಕ್ರಮದ ಕುರಿತು ಆಶಯ ನುಡಿಗಳನ್ನಾಡಿದರು.

ಶ್ರೀ ಬಾಬು ನಾಯ್ಕ ಎಸ್, ಜಿಲ್ಲಾ ನಿರ್ದೇಶಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇನ್ ಸ್ಪೆಕ್ಟರ್ ಶಾಂತಿ ಲಾಲ್ ಜಟಿಯಾ, ಟೀಂ ಕಮಾಂಡರ್ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ರವರ ನೇತೃತ್ವದಲ್ಲಿ ಶೌರ್ಯ ಸ್ವಯಂ ಸೇವಕರಿಗೆ ತರಬೇತಿಯನ್ನು ನೀಡಲಾಯಿತು

ಶ್ರೀ ಲೋಕನಾಥ್ ಅಮೆಚೂರ್, ತಾಲೂಕು ಅಧ್ಯಕ್ಷರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ರವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಶ್ರೀ ಸುರೇಶ್ ಕಣೆಮರಡ್ಕ ಅಧ್ಯಕ್ಷರು ಕೇಂದ್ರ ಒಕ್ಕೂಟ ಸುಳ್ಯ. ಶ್ರೀ ಜೈವಂತ್ ಪಟಗಾರ ಶೌರ್ಯ ಕಾರ್ಯಕ್ರಮ ಯೋಜನಾಧಿಕಾರಿ.
ಶ್ರೀ ಗಣೇಶ್ ಆಚಾರ್ಯ ಜನಜಾಗೃತಿ ವಿಭಾಗದ ಯೋಜನಾಧಿಕಾರಿ ಮತ್ತು ತಾಲೂಕು ಸಮಿತಿಯ ಮಾಸ್ಟರ್ ಶ್ರೀ ಜಯರಾಮ್ ಪಿ ಜಿ , ಕ್ಯಾಪ್ಟನ್ ಸತೀಶ್ ಉಪಸ್ಥಿತರಿದ್ದರು.

ತರಬೇತಿ ಕಾರ್ಯಗಾರದಲ್ಲಿ ಸುಳ್ಯ ತಾಲೂಕಿನ ಶೌರ್ಯ ಘಟಕಗಳ ಸಂಯೋಜಕರು, ಘಟಕ ಪ್ರತಿನಿಧಿಗಳು, ಸ್ವಯಂ ಸೇವಕರು ಭಾಗವಹಿಸಿದ್ದರು.

ಕ್ಷೇತ್ರ ಯೋಜನಾಧಿಕಾರಿ ಶ್ರೀ ಮಾಧವ ಗೌಡ ಸ್ವಾಗತಿಸಿ, ಮೇಲ್ವಿಚಾರಕರಾದ ಶ್ರೀಮತಿ ಸವಿತಾ ನಿರೂಪಿಸಿ, ಶ್ರೀ ದಿನೇಶ್ ವಂದಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments