Homeಕರಾವಳಿಸುಳ್ಯ: ಮೈರೋಲ್ ಹಣ್ಣು ಎಂದು ಭಾವಿಸಿ ಜ್ಯೂಸ್ ಮಾಡಿ ಕುಡಿದ ಮಹಿಳೆ ಸಾವು

ಸುಳ್ಯ: ಮೈರೋಲ್ ಹಣ್ಣು ಎಂದು ಭಾವಿಸಿ ಜ್ಯೂಸ್ ಮಾಡಿ ಕುಡಿದ ಮಹಿಳೆ ಸಾವು

ಕಾಡಿನಲ್ಲಿ ಸಿಗುವ ಯಾವುದೋ ಹಣ್ಣನ್ನು ಮೈರೋಳ್ ಹಣ್ಣ ಎಂದು ಭಾವಿಸಿ ಮನೆಗೆ ತಂದು ಶರಬತ್ತು ಮಾಡಿ ಕುಡಿದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯದ ಅಮರಪಡ್ನೂರು ಗ್ರಾಮದ ಕುಳ್ಳಾಜೆ ನಿವಾಸಿ ಲೀಲಾವತಿ(35) ಮೃತಪಟ್ಟವರು. ಇವರ ಇದೇ ಲೋಕಯ್ಯ ನಾಯ್ಕ ಕೂಡಾ ಹಣ್ಣಿನ ಶರಬತ್ತು ಕುಡಿದು ಅಸ್ವಸ್ಥಗೊಂಡಿದ್ದರೆನ್ನಲಾಗಿದೆ. ಲೀಲಾವತಿ ಹಾಗೂ ಲೋಕಯ್ಯ ನಾಯ್ಕ ಒಂದು ವಾರದ ಹಿಂದೆ ಮೈರೋಳ್ ಹಣ್ಣಿನ ರಸ ತೆಗೆದು ಶರಬತ್ತು ಮಾಡಿ ಕುಡಿದಿದ್ದರು ಎನ್ನಲಾಗಿದೆ.

ಪರಿಣಾಮವಾಗಿ ತಂದೆ ಮಗಳಿಬ್ಬರೂ ಅಸ್ವಸ್ಥಗೊಂಡಿದ್ದರು. ಈ ಪೈಕಿ ವಾಂತಿ, ಭೇದಿ ಕಾಣಿಸಿಕೊಂಡಿದ್ದ ಲೀಲಾವತಿಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ವಸ್ಥತೆ ತೀವ್ರಗೊಂಡ ಹಿನ್ನಲೆಯಲ್ಲಿ ಸೋಮವಾರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments