ಉಡುಪಿಯಲ್ಲಿರುವ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮವು ನ.21ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡುವರು. ವಿದ್ವಾನ್ ಕಬಿಯಾಡಿ ಜಯರಾಮ್ ಅಚಾರ್ಯ ಶುಭಾಂಸನೆಗೈಯಲಿದ್ದಾರೆ.
ಕೊಣಾಜೆ ವಿವಿಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ರಾಷ್ಟ್ರೀಯ ಶಿಕ್ಷಣ ನೀತಿಗೆ ಚಾಲನೆ ನೀಡುತ್ತಿದ್ದಂತೆಯೇ ಕ್ಯಾಂಪಸ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ವಿವಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮಂಗಳಾ ಸಭಾಂಗಣದ ಹೊರಾಂಗಣದಲ್ಲಿ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದು ಧಿಕ್ಕಾರ ಘೋಷಣೆ ಕೂಗಿದ್ದಾರೆ. ತಕ್ಷಣ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಸಿಎಫ್‌ಐ
ಮಂಗಳೂರು :ಆಟಿ ತಿಂಗಳ ತಿಂಡಿ ತಿನಿಸುಗಳು ಆಹಾರ ಕ್ರಮಗಳು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸಮಯದಲ್ಲಿ ಪ್ರಕೃತಿ ದತ್ತವಾಗಿ ಸಿಗುವ ಆಹಾರಗಳು ಜೌಷಧಿಯ ಗುಣಗಳನ್ನು ಹೊಂದಿದೆ. ಅಮಾಸ್ಯೆ ದಿನದ ಹಾಳೆ ಮರದ ಕೆತ್ತೆ ಅತ್ಯಧಿಕ ರೋಗ ನಿರೋಧಕ ಶಕ್ತಿಯಿಂದ ಕೂಡಿದೆ.ಇದರ ಕಷಾಯ ಸೇವಿಸಿದರೆ ರೋಗ ರುಜಿನಗಳು ದೂರವಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸದಸ್ಯ ನಾಗೇಶ್ ಕುಲಾಲ್ ಅವರು ಅಭಿಪ್ರಾಯ ಪಟ್ಟರು. ಆ.1 ರಂದು ಶ್ರೀ ಸುಬ್ರಹ್ಮಣ್ಯ
ಬಂಟ್ವಾಳ: ಬಿಪಿಎಲ್ ಕಾರ್ಡ್ ರದ್ದುಮಾಡುವುದು, ಅದನ್ನು ಪುನರ್ ವಿಮರ್ಶೆ ಮಾಡಿ ಕೊಡಿಸುತ್ತೇವೆ ಎನ್ನುವುದು ಆಡಳಿತ ಪಕ್ಷದ ಪ್ರಚಾರದ ತಂತ್ರ ಎಂದು ಮಾಜಿ ಸಚಿವ ಬಿ. ರಮನಾಥ ರೈ ಆರೋಪಿಸಿದ್ದಾರೆ. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ರಾಜಧರ್ಮದ ಕುರಿತು ಕೇವಲ ಭಾಷಣ ಮಾಡಿದರೆ ಸಾಲದು ಅದನ್ನು ಅನುಷ್ಟಾನಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಆಡಳಿತ ಪಕ್ಷಕ್ಕೆ ಸಂಬಂಧಪಟ್ಟವರೇ ಬಿಪಿಎಲ್ ಕಾರ್ಡ್ ರದ್ದು