HomeFresh Newsಫುಟ್ಬಾಲ್ ತಾರೆಯಾಗಿಸುವ ಆಶ್ವಾಸನೆ ನೀಡಿ ಅಪ್ರಾಪ್ತೆಯ ಅತ್ಯಾಚಾರ - ಕೋಚ್ ಪಲ್ಘರ್ ಅಭಿಜಿತ್ ಮೆಂಡಲ್ ಬಂಧನ

ಫುಟ್ಬಾಲ್ ತಾರೆಯಾಗಿಸುವ ಆಶ್ವಾಸನೆ ನೀಡಿ ಅಪ್ರಾಪ್ತೆಯ ಅತ್ಯಾಚಾರ – ಕೋಚ್ ಪಲ್ಘರ್ ಅಭಿಜಿತ್ ಮೆಂಡಲ್ ಬಂಧನ

ಖ್ಯಾತ ಕಾಲ್ಚೆಂಡು ಆಟಗಾತಿಯಾಗಿಸುವುದಾಗಿ ಆಶ್ವಾಸನೆ ನೀಡಿ ಹದಿನೇಳರ ಹುಡುಗಿಯನ್ನ ಮತ್ತೆ ಮತ್ತೆ ರೇಪ್ ಮಾಡಿದ ಕೋಚ್ ಅಭಿಜಿತ್ ಮೆಂಡಲ್‌ನನ್ನು ಬಂಧಿಸಲಾಗಿದೆ.
ಮುಂಬಯಿ ಹೊರ ವಲಯದ ಮಹಾರಾಷ್ಟ್ರದ ಪಲ್ಘರ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಫುಟ್ಬಾಲ್ ನಕ್ಷತ್ರವಾಗಿಸುವ ಕಿಚ್ಚು ಹೊತ್ತಿಸಿ ಮಾನಭಂಗ ಮಾಡಿದ ಕೃತ್ಯ ನಡೆದಿದ್ದು, ಆ ಸಂಬಂಧ ಕೋಚ್ ಅಭಿಜಿತ್ ಮೆಂಡಲ್‌ನನ್ನು ಪೋಲೀಸರು ಬಂಧಿಸಿದ್ದಾರೆ. ಈ ಕೋಚ್ ಪ್ರಲೋಭನೆ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ಅದರ ವೀಡಿಯೋ ಮೂಡಿಸಿಕೊಂಡಿದ್ದ. ಆಮೇಲೆ ಅದನ್ನು ತೋರಿಸಿ ಬ್ಲ್ಯಾಕ್‌ಮೆಯಿಲ್ ಮಾಡಿ ಮತ್ತೆ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಬ್ಲ್ಯಾಕ್ ಮೆಯಿಲ್ ಹೆಚ್ಚಾದ ಮೇಲೆ ಅನಿವಾರ್ಯವಾಗಿ ಬಾಲಕಿಯು ಪೋಲೀಸರಿಗೆ ದೂರು ನೀಡಿದ್ದಾಳೆ; ಕುಟುಂಬದವರೂ ಠಾಣೆಗೆ ಬಂದಿದ್ದಾರೆ.
ಮುಂಬಯಿ ಹೊರ ವಲಯದ ಪಲ್ಘರ್ ಜಿಲ್ಲೆಯ ವಸಾಯಿಯ ಕಾಸಗಿ ಫುಟ್ಬಾಲ್ ಅಕಾಡೆಮಿಗೆ ಎರಡು ವರುಷದ ಹಿಂದೆ ಬಾಲಕಿ ಸೇರಿದ್ದಾಳೆ. ಒಂದು ವರುಷದಿಂದ ೩೬ರ ಪ್ರಾಯದ ಅಭಿಜಿತ್ ಮೆಂಡಲ್ ಈ ಕುಕೃತ್ಯ ನಡೆಸಿದ್ದಾನೆ. ಪೋಕ್ಸೋ- ಲೈಂಗಿಕ ಶೋಷಣೆಯಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಸಾಯಿಯ ಮಾಣಿಕ್ ಪುರ ಠಾಣೆಯ ಪೋಲೀಸರು ಪ್ರಾಥಮಿಕ ತನಿಖೆ ಮುಗಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments