HomeFresh Newsಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆ : ಸಾವು

ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆ : ಸಾವು

ಮೂಡುಬಿದಿರೆ : ಶತಾಯುಷಿಗೆ ಸಮೀಪದಲ್ಲಿದ್ದ ವೃದ್ಧೆಯೋವ೯ರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಮೂಡುಬಿದಿರೆ ತಾಲೂಕಿನ ಒಂಟಿಕಟ್ಟೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮಾಪಾ೯ಡಿ ಗ್ರಾಮದ ಒಂಟಿಕಟ್ಟೆಯ ದೇವಿ ಪ್ರಸಾದ್ ನಿಲಯದ ದಿ. ತನಿಯ ಪೂಜಾರಿ ಅವರ ಪತ್ನಿ ಕಮಲ (99) ಮೃತಪಟ್ಟ ವೃದ್ಧೆ.
ಉತ್ತಮ ಆರೋಗ್ಯವನ್ನು ಹೊಂದಿದ್ದ ಕಮಲ ಅವರು ಪ್ರತಿದಿನ ಬಾವಿಗೆ ಇಣುಕಿ ನೋಡುವ ಅಭ್ಯಾಸವನ್ನು ಹೊಂದಿದ್ದರು. ಶನಿವಾರವೂ ಎಂದಿನಂತೆ ಬಾವಿಗೆ ಇಣುಕಿ ನೋಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಗಂಭೀರ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾರೆ.
ಮೂಡುಬಿದಿರೆಯ ಅಗ್ನಿಶಾಮಕ ದಳದ ಸಿಬಂಧಿಗಳು ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತರಿಗೆ ಇಬ್ಬರು ಪುತ್ರರು ಮತ್ತು ಓವ೯ ಪುತ್ರಿ ಇದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments