ಬೆಳ್ತಂಗಡಿಯಲ್ಲಿ ಬಾರೀ ಮಳೆಯಿಂದಾಗಿ ರಸ್ತೆಯೆಲ್ಲ ಚರಂಡಿಯಂತಾಗಿದೆ,ತಾಲೂಕಿನ ಕೊಕ್ಕಡ ಪೇಟೆಯಲ್ಲಿ ಸುರಿದ ಭಾರಿ ಮಳೆಗೆ ಚರಂಡಿಯಿಲ್ಲದೆ ರಸ್ತೆಯಲ್ಲೇ ನೀರು ಹೋಗುವಂತಾಗಿದೆ. ರಸ್ತೆಯ ಎರಡೂ ಬದಿಯ ಜಾಗಗಳನ್ನು ಕೆಲವು ವ್ಯಕ್ತಿಗಳು ಚರಂಡಿ ಮುಚ್ಚಿ ಅದನ್ನು ಆಕ್ರಮಿಸಿ ಕಂಡಿರುವುದೇ ಇದಕ್ಕೆ ಕಾರಣವಾಗಿದೆ. ಕೊಕ್ಕಡ ಗ್ರಾಮ ಪಂಚಾಯತ್ ಎದುರಿನಲ್ಲೇ ಅಷ್ಟೊಂದು ನೀರು
ಉಜಿರೆ: ವಿದ್ಯಾರ್ಥಿಗಳಲ್ಲಿ ಹೃದಯವಂತಿಕೆ, ಯೋಚನಾ ಶಕ್ತಿ ಹಾಗೂ ಕಾರ್ಯತತ್ಪರತೆ ಅತ್ಯಗತ್ಯ. ಅವರ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಗೌರವ, ನಿರಂತರ ಕಲಿಕೆ, ಗುರಿ, ಆತ್ಮವಿಶ್ವಾಸಗಳನ್ನು ರೂಢಿಸಿಕೊಳ್ಳಬೇಕು. ಸೇವೆಯೇ ಪರಮ ಗುರಿಯಾಗಿರಬೇಕು ಹಾಗೂ ಭವ್ಯಭಾರತದ ದಿವ್ಯ ಪ್ರಜೆಯಾಗಿ, ಭಾರತವನ್ನು ಗೆಲ್ಲಿಸುವಂತಾಗಬೇಕು.” ಎಂದು ಭಾರತೀಯ ಸೇನೆಯ ನಿವೃತ್ತ ಯೋಧ ಹಾಗೂ ಮಂಗಳೂರಿನ ರಾಮಕೃಷ್ಣ ಆಶ್ರಮದ ‘ಸ್ವಚ್ಛ ಮನಸ್’ ಕಾರ್ಯಕ್ರಮದಸಂಪನ್ಮೂಲ ವ್ಯಕ್ತಿ
ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ ಕಾಡುಕೊಣಗಳ ಉಪಟಳದಿಂದ ಅಲ್ಲಿನ ಕೃಷಿಕರು ಬೇಸತ್ತಿದ್ದಾರೆ. ಗ್ರಾಮದ ಕರಂಬಿತ್ತಿಳು ಎಂಬಲ್ಲಿ ಸುಮಾರು15 ಕುಟುಂಬಗಳು ವಾಸಿಸುತ್ತಿವೆ. ಅಲ್ಲಿನ ನಿವಾಸಿಗಳು ದಿನಾಲೂ ರಾತ್ರಿ ನಿದ್ದೆಗೆಟ್ಟು ಕಾಡು ಕೋಣಗಳನ್ನು ಓಡಿಸುವಂತಾಗಿದೆ. ನಿನ್ನೆ ಬೆಳಿಗ್ಗೆ ಎರಡು ಕಾಡು ಕೋಣಗಳು ಜಿದ್ದಾ ಜಿದ್ದಿಗೆ ನಿಂತಿದ್ದು ಸುಮಾರು ಅರ್ಧ ಗಂಟೆ ಕಾಲ ಕಾದಾಡಿವೆ. ಕೃಷಿಕರ ಅಡಿಕೆ ತೋಟ, ಕೊಕ್ಕೋ ಗಿಡ ಹಾಗೂ ಇತರ ಕೃಷಿಗಳನ್ನು ನಾಶ ಮಾಡುತ್ತಿದೆ.
ಬೆಳ್ತಂಗಡಿಯಲ್ಲಿ ಕೊರೊನಾ ಜಾಗೃತಿ ಬಗ್ಗೆ ಅಧಿಕಾರಿ ವರ್ಗದ ಸಭೆಯನ್ನು ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ಈಗಾಗಲೇ ಬೆಳ್ತಂಗಡಿಯಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗಿದ್ದು 4 ಗ್ರಾಮಗಳು ಕೊರೊನಾ ಮುಕ್ತವಾಗಿದೆ. ಇನ್ನೂ ಹೆಚ್ಚಿನ ಕ್ರಮ ವಹಿಸಲು ಸಲುವಾಗಿ ಎಲ್ಲಾ ಇಲಾಖೆಗಳ ಸಭೆ ಕರೆದು ಚರ್ಚಿಸಲಾಗಿದೆ ಎಂದರು. ಸಭೆಯಲ್ಲಿ ತಹಶೀಲ್ದಾರರು ಮಹೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.