ಕೋಲ್ಪೆ: ಭರವಸೆಯ ಬೆಳಕು ಸಮಿತಿ ಕಚೇರಿ ಉದ್ಘಾಟನೆ
ನೆಲ್ಯಾಡಿ: ಭರವಸೆಯ ಬೆಳಕು ಸಮಿತಿ ಕೋಲ್ಪೆ ಇದರ ಕಚೇರಿ ಉದ್ಘಾಟನೆ ಕಾರ್ಯಕ್ರಮ ಬಹು ಇರ್ಷಾದ್ ದಾರಿಮಿ ಉಸ್ತಾದ್ ಮಿತ್ತಬೈಲ್ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ ಮುದರ್ರಿಸ್ ಕೋಲ್ಪೆ. ಕೋಲ್ಪೆ ಜಮಾಹತ್ ಅಧ್ಯಕ್ಷರಾದ ಕೆ.ಕೆ ಅಬೂಬಕ್ಕರ್. ಭರವಸೆಯ ಬೆಳಕು ಸಮಿತಿಯ ಅಧ್ಯಕ್ಷರಾದ ಯು.ಕೆ.ಅಬ್ದುಲ್ ಹಮೀದ್. ಕಲಂದರ್ ಷಾ ದಪ್ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕೋಲ್ಪೆ. ಮಿಲೇನಿಯಂ ಬ್ರದರ್ಸ್ ಅಧ್ಯಕ್ಷರಾದ ಕೆ.ಕೆ.ಇಸ್ಮಾಯಿಲ್ ಹಾಜಿ ಕೋಲ್ಪೆ ಬಿಷಾರ ಹೆಲ್ಪಿಂಗ್ ಹ್ಯಾಂಡ್ ಅಧ್ಯಕ್ಷರಾದ ತೌಫೀಕ್. ಎಂ.ಕೆ., ಎಸ್.ಕೆ. ಎಸ್.ಎಸ್.ಎಪ್ ಅಧ್ಯಕ್ಷರಾದ ರಹೀಂ ಎಂ.ಕೆ., ಗೋಳಿತೊಟ್ಟು ಎಸ್ ಕೆ ಎಸ್ ಎಸ್ ಎಪ್ ಅಧ್ಯಕ್ಷರಾದ ಹನೀಫ್ ಮರ್ಲಾಪ್ ಹಾಗೂ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಭರವಸೆಯ ಬೆಳಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶಮೀರ್ ಅರ್ಶದಿ ಸ್ವಾಗತಿಸಿ. ಜೊತೆ ಕಾರ್ಯದರ್ಶಿ ಕೆ.ಎಸ್ ಶರೀಫ್ ವಂದಿಸಿದರು.