Home Posts tagged #cpim protest

ಮೂಡುಬಿದಿರೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಡಿ.19ಕ್ಕೆ ಜಿಲ್ಲಾಧಿಕಾರಿ ಕಚೇರಿ ಚಲೋ ಹೋರಾಟ

ಮೂಡುಬಿದಿರೆ: ಜಿಲ್ಲೆಯ ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲ ಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಸಿಪಿಐ(ಎಂ)ವತಿಯಿಂದ ಡಿ. 19ರಂದು  ಬೆಳಿಗ್ಗೆ 10 ಗಂಟೆಗೆ  ಮಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಚಲೋ ಹೋರಾಟ ನಡೆಯಲಿದೆ ಎಂದು ಸಿಪಿಐ(ಎಂ)ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿದರು. ಅವರು ಮೂಡುಬಿದಿರೆಯಲ್ಲಿ ಸುದ್ದಿಗೋಷ್ಟಿ

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಸಿಪಿಐಎಂ ರಾಜ್ಯ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಸಿಪಿಐಎಂ ರಾಜ್ಯ ಸಮಿತಿ ತೀರ್ಮಾನ ಪ್ರಕಾರ ಕೇರಳ ಎಲ್ಲಾ ಏರಿಯಾ ಕೇಂದ್ರಗಳಲ್ಲಿ ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಉಪ್ಪಳ ಪೋಸ್ಟ್ ಆಫೀಸ್ ಎದುರುಗಡೆ ಧರಣಿ ಹಮ್ಮಿಕೊಳಲಾಯಿತು. ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕಾಂ ಕೆ ವಿ ಕುಂಞಿಹಿರಾಮನ್ ಧರಣಿ ಉದ್ಘಾಟಿಸಿದರು. ಅಬ್ದುಲ್ ರಝಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದರು.

ಮಂಜೇಶ್ವರದಲ್ಲಿ ಕೇಂದ್ರದ ಜನವಿರೋಧಿ ನೀತಿ ಖಂಡಿಸಿ ಸಿಪಿಐಎಂನಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆದುರಾಗಿ ರಾಜ್ಯ ವ್ಯಾಪಕವಾಗಿ ಕೇಂದ್ರ ಸರಕಾರದ ಕಚೇರಿಗಳ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರದ ಹಲವೆಡೆಗಳಲ್ಲೂ ಪ್ರತಿಭಟನಾ ಧರಣಿ ನಡೆಯಿತು. ಸಿಪಿಐಎಂ ಕುಂಜತೂರು ಲೋಕಲ್ ಸಮಿತಿ ವತಿಯಿಂದ ಕುಂಜತ್ತೂರು ಅಂಚೆ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಸಿಪಿಐಎಂ ಮಂಜೇಶ್ವರ ಏರಿಯಾ ಸೆಕ್ರಟರಿ ಕೆ ವಿ ಕುಂಞಿರಾಮನ್ ಉದ್ಘಾಟಿಸಿ ಮಾತಾಡಿದರು. ಶ್ರೀಧರ ಅಧ್ಯಕ್ಷತೆ ವಹಿಸಿದ್ದರು.

ದ.ಕ.ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫೂ ರದ್ದಾಗಲಿ :ಸಿಪಿಐ(ಎಂ)

ಕೊರೋನಾ ನಿಯಂತ್ರಣದ ಹೆಸರಿನಲ್ಲಿ ಎಲ್ಲಾ ವಿಭಾಗದ ಜನತೆಗೆ ವಿನಾಃ ಕಾರಣ ತೊಂದರೆ ನೀಡುವ ವಾರಾಂತ್ಯದ ಕರ್ಫ್ಯೂವನ್ನು ಕೂಡಲೇ ರದ್ದುಮಾಡಬೇಕೆಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ದ.ಕ. ಜಿಲ್ಲಾಡಳಿತವನ್ನು ಒತ್ತಾಯಿಸಿದೆ. CPIM ಹಿರಿಯ ನಾಯಕರಾದ ಕಾಂ.ಕೆ ಆರ್ ಶ್ರೀಯಾನ್ ರವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಿಪಿಐ(ಎಂ)ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದ್ದು, ಇಂತಹ ಅವೈಜ್ಞಾನಿಕ ಕರ್ಫೂನಿಂದಾಗಿ ಕೋರೋನ ನಿಯಂತ್ರಣ

ಬಸ್ ಮಾಲಕರ ಲಾಬಿಗೆ ಶರಣಾದ ಜಿಲ್ಲಾಡಳಿತ : ಸುನಿಲ್ ಕುಮಾರ್ ಬಜಾಲ್

ಖಾಸಗಿ ಬಸ್ ಪ್ರಯಾಣ ದರವನ್ನು ವಿಪರೀತವಾಗಿ ಏರಿಸುವ ಮೂಲಕ ದ.ಕ.ಜಿಲ್ಲಾಡಳಿತ ಸಂಪೂರ್ಣವಾಗಿ ಬಸ್ ಮಾಲಕರ ಲಾಬಿಗೆ ಶರಣಾಗಿದೆ. ಬೆರಳೆಣಿಕೆಯಷ್ಟು ಇರುವ ಬಸ್ ಮಾಲಕರ ಸಂಕಷ್ಟದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸುವ ಜಿಲ್ಲಾಧಿಕಾರಿಗಳು,ಜಿಲ್ಲೆಯ ಲಕ್ಷಾಂತರ ಜನತೆಯ ಸಂಕಷ್ಟವನ್ನು ಅರಿಯಲು ವಿಫಲರಾಗಿದ್ದಾರೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗೀ ಬಸ್ ಪ್ರಯಾಣ ದರಯೇರಿಕೆಯ ವಿರುದ್ಧ

ಮಂಗಳೂರಿನ ಹಲವೆಡೆ ಬೆಲೆ ಏರಿಕೆ ವಿರುದ್ಧ ಸಿಪಿಐಂ ವತಿಯಿಂದ ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಖಂಡಿಸಿ CPIM ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ನಡೆಯುತ್ತಿರುವ ವಾರಾಚರಣೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು,ಇಂದು ನಗರದ ಜಪ್ಪಿನಮೊಗರು, ಜಲ್ಲಿಗುಡ್ಡ,ಕಾವೂರು,ಶಕ್ತಿನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳು ಜರುಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಜಪ್ಪಿನಮೊಗರುನಲ್ಲಿ CPIM ಮಹಿಳಾ ಕಾರ್ಯಕರ್ತೆಯರು

ಬೆಲೆಯೇರಿಕೆಯ ವಿರುದ್ಧ ಬೀದಿಬದಿ ವ್ಯಾಪಾರಸ್ಥರಿಂದ ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ವಿರೋಧಿಸಿ ಮಂಗಳೂರು ನಗರದ ಬೀದಿಬದಿ ವ್ಯಾಪಾರಸ್ಥರೂ ಕೂಡ ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸ್ಟೇಟ್ ಬ್ಯಾಂಕ್ ಬಳಿ ಹಾಗೂ ಲೇಡಿಗೋಷನ್ ಬಳಿಯಲ್ಲಿ ಬೀದಿಬದಿ ವ್ಯಾಪಾರಸ್ಥರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಬಿತ್ತಿಚಿತ್ರ ಹಿಡಿದು ಪ್ರತಿಭಟಿಸಿದರು.ಬೆಲೆಯೇರಿಕೆಯ ವಿರುದ್ದ CPIM ಮಂಗಳೂರು

ವಿಪರೀತ ಬೆಲೆಯೇರಿಕೆಯಿಂದ ದೇಶದ ಜನರ ಬದುಕು ತತ್ತರ- ಸುನೀಲ್‌ ಕುಮಾರ್ ಬಜಾಲ್

ಲಾಕ್ಡೌನ್ ಅವಧಿಯಲ್ಲಿ ಜನಸಾಮಾನ್ಯರಿಗೆ ಉದ್ಯೋಗವಿಲ್ಲದೆ , ವ್ಯಾಪಾರವಿಲ್ಲದೆ ಬದುಕು ನಡೆಸಲು ಅಸಾಧ್ಯವಾಗದಂತಹ ಪರಿಸ್ಥಿಯಲ್ಲಿರುವಾಗ ನಮ್ಮನ್ನಾಳುವ ಕೇಂದ್ರ ಸರಕಾರ ಪೆಟ್ರೋಲ್, ಡೀಸಲ್, ಅಡುಗೆ ಅನಿಲ ಸಹಿತ, ಗೃಹ ಉಪಯೋಗಿ ವಸ್ತಗಳ ವಿಪರೀತ ಬೆಲೆಯೇರಿಕೆಯಿಂದ ದೇಶದ ಜನರ ಬದುಕು ತತ್ತರಗೊಂಡಿದೆ ಎಂದು ಸಿಪಿಐಎಂ ಪಕ್ಷದ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್‌ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು. ಅವರು ಪೆಟ್ರೋಲ್, ಡೀಸಲ್, ಗ್ಯಾಸ್ ದರ