HomeFresh Newsಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಸಿಪಿಐಎಂ ರಾಜ್ಯ ಸಮಿತಿಯಿಂದ ಪ್ರತಿಭಟನೆ

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಸಿಪಿಐಎಂ ರಾಜ್ಯ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಸಿಪಿಐಎಂ ರಾಜ್ಯ ಸಮಿತಿ ತೀರ್ಮಾನ ಪ್ರಕಾರ ಕೇರಳ ಎಲ್ಲಾ ಏರಿಯಾ ಕೇಂದ್ರಗಳಲ್ಲಿ ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಉಪ್ಪಳ ಪೋಸ್ಟ್ ಆಫೀಸ್ ಎದುರುಗಡೆ ಧರಣಿ ಹಮ್ಮಿಕೊಳಲಾಯಿತು.

ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಕಾರ್ಯದರ್ಶಿ ಕಾಂ ಕೆ ವಿ ಕುಂಞಿಹಿರಾಮನ್ ಧರಣಿ ಉದ್ಘಾಟಿಸಿದರು. ಅಬ್ದುಲ್ ರಝಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಚಂದ್ರಹಾಸ ಶೆಟ್ಟಿ ಮಾಸ್ಟರ್, ವರ್ಕಾಡಿ ಪಂಚಾಯತ್ ಅಧ್ಯಕ್ಷ ರಾದ ಭಾರತಿ ,ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ, ಡಿ ಬೂಬ, ಗೀತಾ ಸಾಮಣಿ, ಬೇಬಿ ಶೆಟ್ಟಿ ,ಪುರುಷೋತ್ತಮ ಬಲ್ಲೂರ್, ಕಮಲಾಕ್ಷ ಕನಿಲ, ನವೀನ್ ತಚ್ಚಿರೆ, ಬ್ಲೋಕ್ ಪಂಚಾಯತ್ ಮೊಯಿದೀನ್ ಕುಂಞಿ, ಅರವಿಂದ ಚಿಗುರುಪಾದೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments