ಕೂಳೂರು ಮೊಗವೀರ ಗ್ರಾಮ ಸಭೆಯ ವತಿಯಿಂದ ಕುಳಾಯಿಯಲ್ಲಿ ಸೋಮವಾರ ಉಚಿತ ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು. ಮೀನುಗಾರಿಕೆ, ಬಂದರು ಸಚಿವ ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಕಾರ ಲಸಿಕೆ ನೀಡಲು ಆದ್ಯತೆಯ ಪಟ್ಟಿ ಮಾಡುವಾಗ ಮೀನುಗಾರ ಸಮುದಾಯವನ್ನು ಸೇರಿಸಬೇಕು ಎಂದು ನಾನು ಸೂಚಿಸಿದ ಮೇರೆಗೆ ಇದೀಗ ಬೇರೆ ಬೇರೆ ಭಾಗಗಳಲ್ಲಿ ಲಸಿಕೆ
ಮಂಗಳೂರಿನ ಕೂಳೂರು ಹಳೆ ಸೇತುವೆಯಲ್ಲಿ ಭಾರೀ ಗಾತ್ರದ ಹೊಂಡಗಳಲ್ಲಿ ಮಳೆ ನೀರು ನಿಂತು ವಾಹನ ಚಾಲಕರು ಪರದಾಡುವ ಜತೆಗೆ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಗಿದೆ. ಮೈಕ್ರೋ ಟೆಕ್ನಾಲಜಿ ಮೂಲಕ ದುರಸ್ತಿ ಮಾಡಲಾದ ಕೂಳೂರು ಹಳೇ ಸೇತುವೆಯ ಇಕ್ಕೆಲಗಳಲ್ಲಿ ಇದೀಗ ಹೊಂಡ ಬೀಳಲಾರಂಭಿಸಿದೆ. ಡಾಮರು ತೇಪೆ ಹಾಕಿ ಒಂದೆರಡು ತಿಂಗಳು ಕಳೆಯುವುದರೊಳಗೆ ಒಂದೇ ಮಳೆಗೆ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಸೋಮವಾರ ಮಳೆಯ ನಡುವೆ ಹೆದ್ದಾರಿ ಇಲಾಖೆ ತೇಪೆ ಹಾಕಲು ಮುಂದಾಗಿದ್ದು ಲಾಕ್ ಡೌನ್