Home Posts tagged #mangalore (Page 17)

ಇವಿಎಂ ಭದ್ರತಾ ಕೇಂದ್ರಗಳ ಪೂರ್ವಸಿದ್ಧತೆ ಪರಿಶೀಲನೆ

ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲನೆ ಮಾಡಿದರು. ಸುರತ್ಕಲ್ ಎನ್.ಐ.ಟಿ.ಕೆ. ಇಂಜಿನಿಯರಿಂಗ್ ಕಾಲೇಜಿಗೆ ತೆರಳಿ ದಕ್ಷಿಣ ಕನ್ನಡ ಜಿಲ್ಲೆಯ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು

ಕೊಕ್ಕಡ: ಕಾಡಾನೆ ದಾಳಿ ಅಪಾರ ಕೃಷಿಗೆ ಹಾನಿ

ಕೊಕ್ಕಡ: ಇಲ್ಲಿಯ ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಒಂಟಿಸಲಗವು ಮಾ.13ರಂದು ರಾತ್ರಿ ದಾಳಿ ನಡೆಸಿದ್ದು ಕೃಷಿಗೆ ಹಾನಿ ಮಾಡಿದೆ. ಕೆಲವು ದಿನಗಳಿಂದ ಕಾಡಾನೆಯು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದು ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಎಚ್ಚರಿಕೆಯ ಮಾಹಿತಿಯನ್ನು ನೀಡುತ್ತಿದ್ದು, ನಿನ್ನೆ ರಾತ್ರಿ ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಕಾಡಾನೆ ಸಂಚಾರ ಮಾಡಿದ್ದು ತೋಟಕ್ಕೆ ನುಗ್ಗಿ ಅಲ್ಲಿನ ಬಾಳೆ

ಸುಳ್ಯ: ಬೆಳ್ಳಾರೆ ಕನ್ಸ್ಟ್ರಕ್ಷನ್ ನ ಮಾಲಕ ಇಂಜಿನಿಯರ್ ಮೊಹಮ್ಮದ್ ನಿಧನ

ಬೆಳ್ಳಾರೆ ನಿವಾಸಿ ಇಂಜಿನಿಯರ್ ಮುಹಮ್ಮದ್ ರವರು ಅಲ್ಪದಿನದ ಅನಾರೋಗ್ಯದಿಂದ ರಾತ್ರಿ ಪುತ್ತೂರಿನ ದರ್ಬೆಯ ಆಸ್ಪತ್ರೆಯಲ್ಲಿ ನಿಧನರಾದರು. ಸುಳ್ಯ ತಾಲೂಕಿನಲ್ಲಿ ಇಂಜಿನಿಯರ್ ಮೊಹಮ್ಮದ್ ಎಂದು ಚಿರಪರಿಚಿತರಾಗಿರುವ ಇವರು ಸರ್ವಧರ್ಮದವರೊಂದಿಗೆ ಉತ್ತಮ ಬಾಂಧವ್ಯವನ್ನುಹೊಂದಿದ್ದರು.ಬೆಳ್ಳಾರೆಯ ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಬೆಳ್ಳಾರೆ ನಿವಾಸಿಯಾಗಿರುವ ಆಶ್ರಫ್ ಮತ್ತು ಆರೀಫ್ ರವರ ತಂದೆ ಇಂದು ಬೆಳ್ಳಾರೆ ಕೇಂದ್ರ ಜುಮ್ಮ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮಂಗಳೂರು: ಮಾಲಾಡಿ ಕೋರ್ಟ್ ಬಡಾವಣೆಯಲ್ಲಿ ಪಾರ್ಕ್ ಉದ್ಘಾಟನೆ

ಬಂಗ್ರಕೂಳೂರು ವಾರ್ಡ್‌ಗೆ ಒಳಪಟ್ಟ ಮಾಲಾಡಿಕೋರ್ಟ್ ಬಡಾವಣೆಯಲ್ಲಿ ನಿರ್ಮಾಣ ಗೊಂಡ ಪಾರ್ಕ್‌ನ ಉದ್ಘಾಟನೆ ನಡೆಯಿತು. ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಉದ್ಘಾಟಿಸಿ ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಅನುದಾನ ಅಂದಾಜು 40 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.ಈ ಹಿಂದಿನ ನನ್ನ ಶಾಸಕ ಅವಧಿಯಲ್ಲಿ ಇದಕ್ಕೆ ಮುಡಾದ ವತಿಯಿಂದ ಅನುದಾನ ಮೀಸಲಿಡಲಾಗಿತ್ತು.ಅನೇಕ ಕಿರು ಪಾರ್ಕ್‌ಗಳನ್ನು ನಿರ್ಮಿಸಿ ಹಸಿರು ವಾತಾವರಣ ಹಾಗೂ ಕೆರೆಗಳ ಪುನರುಜ್ಜೀವನಕ್ಕೆ ಒತ್ತು ನೀಡಿ

ಉಡುಪಿ : ಕಾಂಗ್ರೆಸ್‌ ಗ್ಯಾರಂಟಿ ಸಮಾವೇಶ

ಉಡುಪಿಯ ಮಹಾತ್ಮ ಗಾಂಧಿ ಮೈದಾನದಲ್ಲಿ ಗ್ಯಾರೆಂಟಿ ಸಮಾವೇಶದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಗ್ಯಾರಂಟಿ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಿಜೆಪಿಯವರು ಗ್ಯಾರೆಂಟಿ ಯೋಜನೆ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನೇರವಾಗಿ ಫಲಾನುಭವಿಗಳಿಗೆ ಪ್ರಯೋಜನ ತಿಳಿಸಲು ಈ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಜಿಲ್ಲಾ ಮಟ್ಟದಲ್ಲಿ ಅನುಷ್ಟಾನ ಸಮಿತಿ ರಚನೆ ಮಾಡಿದ್ದೇವೆ. ಎಲ್ಲಾ ಅರ್ಹರಿಗೆ ಗ್ಯಾರೆಂಟಿ ತಲುಪಬೇಕು.

ಸಿಎಎ ಜಾರಿ ಬಿಜೆಪಿಯ ಚುನಾವಣಾ ಗಿಮಿಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ

ಪೌರತ್ವ ಕಾಯ್ದೆಯನ್ನು ಕೇವಲ ಚುನಾವಣೆಯ ದೃಷ್ಡಿಯಿಂದ ಕೇಂದ್ರ ಸರಕಾರ ಜಾರಿ ಮಾಡಿದ್ದು, ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿರುವುದರಿಂದ ಈ ರೀತಿಯ ಗಿಮಿಕ್ಸ್ ಗಳನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಪೌರತ್ವ ಕಾಯ್ದೆ ಜಾರಿ ಬಗ್ಗೆ ಮುಖ್ಯಮಂತ್ರಿಗಳ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಇಷ್ಟು ವರ್ಷಗಳ ಕಾಲ ಈ ಬಗ್ಗೆ

ತೆಂಕಮಿಜಾರು ಗ್ರಾ.ಪಂ: ವಿಶೇಷ ಚೇತನರಿಗೆ ಚೆಕ್ ವಿತರಣೆ

ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂಚಾಯತ್ ನಲ್ಲಿ ಮಂಗಳವಾರ 2023-24ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ 49 ಮಂದಿ ವಿಶೇಷಚೇತನರಿಗೆ ತಲಾ 2000ದಂತೆ ರೂ 98000 ಚೆಕ್ಕನ್ನು ವಿತರಿಸಲಾಯಿತು.ವೆನ್ ಲಾಕ್ ಆಸ್ಪತ್ರೆಯ ಎಂಆರ್ ಡಬ್ಲ್ಯೂ ಜಯಪ್ರಕಾಶ್ ವಿಶೇಷ ಚೇತನರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಪಂಚಾಯತ್

ಒಟಿಟಿಯಲ್ಲಿ ಮಂಕುಭಾಯ್ ಫಾಕ್ಸಿ ರಾಣಿ ಸಿನಿಮಾ

ಬಿಗ್‌ಬಾಸ್ ಸೀಸನ್ 9ರ ವಿಜೇತ ನಟ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಕನ್ನಡ ಸಿನಿಮಾ ಇದೀಗ ಒಟಿಟಿಯಲ್ಲಿ ಲಭ್ಯವಿದೆ. ಅಮೆಜಾನ್ ಪ್ರೈಮ್‌ನಲ್ಲಿ ಸಿನಿ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ. ಕಳೆದ ವರ್ಷ ಸಿನಿಮಾ ಮಂದಿರದಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿದ್ದ ಮಂಕು ಭಾಯ್ ಫಾಕ್ಸಿ ರಾಣಿ ಸಿನಿಮಾ ಓಟಿಟಿ ಪ್ಲಾಟ್ ಪಾಮ್‌ನಲ್ಲಿ ಲಭ್ಯವಿದೆ. ಇದೀಗ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಲು ಅವಕಾಶವಿದೆ.ನಟ ರೂಪೇಶ್ ಶೆಟ್ಟಿ

ಮೂಡುಬಿದಿರೆ: ರೈತರಿಂದ ಪ್ರತಿಭಟನಾ ಜಾಥಾ: ಅಡಿಕೆ ಆಮದು ನಿಷೇಧ, ರೂ. 450ಕನಿಷ್ಟ ಬೆಂಬಲ ಬೆಲೆಗೆ ಆಗ್ರಹ

ಮೂಡುಬಿದಿರೆ : ವಿದೇಶಿ ಅಡಿಕೆ ಆಮದನ್ನು ನಿಷೇಧಿಸಬೇಕು, ತೆಂಗು ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಮತ್ತು ಹೊಸ ಅಡಿಕೆಗೆ ಪ್ರತೀ ಕೆ.ಜಿಗೆ 450 ರೂಪಾಯಿ ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನಾ ಜಾಥ ನಡೆಯಿತು. ಬಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ರಾಜಕಾರಣಿಗಳು, ವ್ಯಾಪಾರಿಗಳು, ದಲ್ಲಾಳಿಗಳಿಂದ ರೈತರು

ಕುಂದಾಪುರ: ಕೊಲ್ಲೂರು ದೇವಳಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭೇಟಿ

ಕುಂದಾಪುರ: ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಕೊಲ್ಲೂರು ಶ್ರೀ ಮೂಕಾಂಬಿಕ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ವೀರಭದ್ರ ದೇವರಿಗೆ ಕಾಯಿ ಸಮರ್ಪಿಸಿದದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪ, ಯಾವಾಗಲೂ ಕೊಲ್ಲೂರಿಗೆ ಆಗಮಿಸಿತಾಯಿಯ ದರ್ಶನ ಪಡೆಯುತ್ತಿರುತ್ತೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಕಾಂತೇಶ್ ಹಾವೇರಿಯಿಂದ