ಹಿಂದಿಯು 500 ವರುಷಗಳ ಹಿಂದೆ ಮೊಗಲರ ಕಾಲದಲ್ಲಿ ಹುಟ್ಟಿದ ಭಾಷೆ. 1,700 ವರುಷಗಳ ಹಿಂದೆ ಪಾಳಿ, ಪ್ರಾಕೃತದಿಂದ ಸೋಸಿಕೊಂಡ ಭಾಷೆ ನಿಜ ಸಂಸ್ಕೃತ.

ಅರುವತ್ತು ಕೋಟಿ ಜನರು ಮಾತನಾಡುವ ಹಿಂದಿ ಲೋಕದಲ್ಲಿ ಮಾಂಡರಿನ್, ಇಂಗ್ಲಿಷ್ ಬಳಿಕ ಅತಿ ಹೆಚ್ಚು ಜನರ ಭಾಷೆಯಾಗಿ 2025ರಲ್ಲಿ ಸ್ಪಾನಿಶನ್ನು ನಾಲ್ಕನೆಯ ಸ್ಥಾನಕ್ಕೆ ದೂಡಿದೆ; ಮೂರನೆಯ ಸ್ಥಾನಕ್ಕೆ ಏರಿದೆ. ಹಿಂದಿಯು ತುಳು ಸಹಿತ ಹಲವು ಭಾಷೆಗಳ ಮೇಲೋಗರವಾಗಿದೆ. ಭಾರತದಲ್ಲಿ ಕೂಡ ಹಿಂದಿ ಹೆಚ್ಚು ಜನರು ಮಾತನಾಡುವ ಭಾಷೆ, ಆದರೆ ಸಂವಿಧಾನ ಅದಕ್ಕೆ ವಿಶೇಷ ಸ್ಥಾನಮಾನ ಏನನ್ನೂ ನೀಡಿಲ್ಲ.

ಭಾರತದ ಎಲ್ಲ ರಾಜ್ಯಗಳಲ್ಲಿ ಕಲಿಯಲು ಎರಡು ಭಾಷೆ ಅಧಿಕೃತ, ಮೂರರ ಮೇಲಿನದು ಕಲಿಯುವವರಿಗೆ ಬಿಟ್ಟುದು. ಕರ್ನಾಟಕದಲ್ಲಿ ಮೂರು ಭಾಷೆಯ ಹೊರೆ ಏಕಿದೆ ಎನ್ನುವುದನ್ನು ಶಿಕ್ಷಣ ತಜ್ಞರೇ ಹೇಳಬೇಕು. ಹಿಂದಿ ಹಾಗೂ ಸಂಸ್ಕೃತ ಕಲಿಕೆ ಮುಖ್ಯವಾಗಿ ಇಲ್ಲಿ ಒಂದು ಜಾತಿಯ ಹಿತಕ್ಕಾಗಿ ಇದೆ. ಜಾತಿ ಗಣತಿಯಲ್ಲಿ ಈ ವಿಷಯವನ್ನು ಕೂಡ ಪರಿಗಣಿಸಬೇಕು.

