ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಮೊಗವೀರ ಭವನದಲ್ಲಿ ಆಯೋಜಿಸಲಾಗಿದ್ದ ಉಪ್ಪಳದಿಂದ ಶಿರೂರುವರೆಗಿನ ಮೊಗವೀರ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಗುರಿಕಾರರಿಗೆ ಗೌರವಧನ ವಿತರಣಾ ಕಾರ್ಯಕ್ರಮವನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಾಡೋಜ ಜಿ. ಶಂಕರ್ ಅವರು ಉದ್ಘಾಟಿಸಿದರು.
ಮಂಗಳೂರು: ಮೀನುಗಾರಿಕಾ ಋತುವಿನ ಆರಂಭದಲ್ಲಿ ಸಮುದ್ರಪೂಜೆಯನ್ನು ಮಾಡುವ ಮೂಲಕ ಮತ್ಥ್ಯ ಸಂಪತ್ತನ್ನು ಕರುಣಿಸಲು ಮತ್ತು ಮೀನುಗಾರ ಬಂಧುಗಳ ಸುರಕ್ಷೆಗಾಗಿ ಪ್ರಾರ್ಥಿಸಿ ಮಿತ್ರಪಟ್ಟಣ ಮೊಗವೀರ ಮಹಾ ಸಮಾಜದ ವತಿಯಿಂದ ಸಮುದ್ರ ಪೂಜಾ ಕಾರ್ಯಕ್ರಮ ನಡೆಯಿತು. ಸಮುದ್ರ ಪೂಜೆಯ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿಯವರು ಸಮುದ್ರಕ್ಕೆ ಹಾಲು ಹಾಕುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.ಈ ಸಂದರ್ಭದಲ್ಲಿ ಮಿತ್ರಪಟ್ಟಣ ಮೊಗವೀರ ಸಮಾಜದ ಅಧ್ಯಕ್ಷರಾದ ರವೀಂದ್ರ
ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಪ್ರಾಥಮಿಕ ಮೀನುಗಾರರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚಗೋಡು ಇವರ ನೇತೃತ್ವದಲ್ಲಿ ಮಸ್ತ್ಯ ಸಂಪತ್ತು ಹೇರಳವಾಗಿ ದೊರೆಯಲಿ ಮತ್ತು ಇತ್ತೀಚಿನ ದಿನಗಳಲ್ಲಿ ಮೀನಗಾರರಲ್ಲಿ ವೈಮನಸ್ಸು ಉಂಟಾಗುತ್ತಿದ್ದು ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಪರಸ್ಪರ ಸೌಹಾರ್ದತೆ ಯಿಂದ ಮೀನುಗಾರಿಕೆ ಮಾಡಲಿ ಎಂಬ ಸದುದ್ದೇಶದಿಂದ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗಂಗೆ ಮಾತೆಗೆ ನಮೀಸುತ್ತಾ ಮತ್ಸ್ಯ ಬೇಟೆಯಾಡುವಾಗ
ಕೂಳೂರು ಮೊಗವೀರ ಗ್ರಾಮ ಸಭೆಯ ವತಿಯಿಂದ ಕುಳಾಯಿಯಲ್ಲಿ ಸೋಮವಾರ ಉಚಿತ ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು. ಮೀನುಗಾರಿಕೆ, ಬಂದರು ಸಚಿವ ಅಂಗಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸರಕಾರ ಲಸಿಕೆ ನೀಡಲು ಆದ್ಯತೆಯ ಪಟ್ಟಿ ಮಾಡುವಾಗ ಮೀನುಗಾರ ಸಮುದಾಯವನ್ನು ಸೇರಿಸಬೇಕು ಎಂದು ನಾನು ಸೂಚಿಸಿದ ಮೇರೆಗೆ ಇದೀಗ ಬೇರೆ ಬೇರೆ ಭಾಗಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ ಎಂದರು. ಕೆಲವೊಂದು ಅಪಪ್ರಚಾರಗಳಿಂದ ಜನ ಲಸಿಕೆ ಪಡೆಯಲು ಹಿಂದೇಟು ಹಾಕಿದರೂ