Home Posts tagged #moodabidre (Page 5)

ಮೂಡುಬಿದಿರೆ : ಮುರುಕು ಮನೆಯಲ್ಲಿ ಜೀವಿಸುತ್ತಿರುವ ಅಸಹಾಯಕ ಕುಟುಂಬಕ್ಕೆ ಬೇಕಾಗಿದೆ ನೆರವು

ಮೂಡುಬಿದಿರೆ: ಮಳೆಗಾಲ ಬಂತೆಂದರೆ ಸಾಕು “ಉಳ್ಳವರು” ತಮಗೆ ಮನೆಗೆ ಬೇಕಾದ ವ್ಯವಸ್ಥೆಯನ್ನು ಬೇಗನೇ ಮಾಡಿ ಮುಗಿಸುತ್ತಾರೆ. ಆದರೆ ಒಂದು ತುತ್ತು ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿಯಲ್ಲಿರುವ ಬಡವರು ಮಾತ್ರ ಹೊಟ್ಟೆ ತುಂಬಿಸುವುದು ಹೇಗೆ ಎಂಬುದೇ ಚಿಂತೆ ಇರುವಾಗ ಮನೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಕಷ್ಟ ಸಾಧ್ಯವಾಗುತ್ತದೆ. ಇಂತಹ

ಮೂಡುಬಿದಿರೆ : ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ರೈತಸೇನೆ ಒತ್ತಾಯ

ಮೂಡುಬಿದಿರೆ:ತಾಲೂಕಿನಲ್ಲಿ “ ಬಡವರು, ವಿದ್ಯಾರ್ಥಿಗಳು, ದುಡಿಯುವ ವರ್ಗದವರ ಹಸಿವು ನೀಗಿಸಲು ಕರ್ನಾಟಕ ಸರಕಾರ ಜಾರಿಗೆ ತಂದಿರುವ “ಇಂದಿರಾ ಕ್ಯಾಂಟೀನ್” ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಆರಂಬಿಸುವಂತೆ ದ.ಕ ಜಿಲ್ಲಾ ಭಾರತೀಯ ರೈತ ಸೇನೆ ಒತ್ತಾಯಿಸಿ ಸಭಾಪತಿ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಆಡಳಿತ ಸೌಧದ ಎದುರಿನಲ್ಲಿರುವ ಹಳೆಯ ತಾಲೂಕು ಕಚೇರಿಯ ಪಡಸಾಲೆಯು ಯಾವುದೇ ಉದ್ದೇಶಕ್ಕೆ ಬಳಕೆಯಾಗದೆ

ಮೂಡುಬಿದರೆ : ಅಕ್ರಮ ಗೋವು ಸಾಗಾಟ – ಮೂರು ಗೋವುಗಳ ರಕ್ಷಣೆ

ಮೂಡುಬಿದಿರೆ: ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಗೋವುಗಳನ್ನು ಬಜರಂಗದಳದ ಕಾರ್ಯಕರ್ತರು ಮತ್ತು ಮೂಡುಬಿದಿರೆ ಪೊಲೀಸರು ರಕ್ಷಿಸಿದ್ದಾರೆ. ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿ ಜಂಟಿ ಕಾರ್ಯಚರಣೆ ನಡೆಸಿ ಕೆಲ್ಲಪುತ್ತಿಗೆ ಬಳಿಯಿಂದ ಕಾರನ್ನು ಹಿಂಬಾಲಿಸಿಕೊಂಡು ಬಂದು ಜಿ.ಕೆ.ಗಾರ್ಡನ್ ಹಿಡಿದಿದ್ದಾರೆ. ಈ ಸಂದರ್ಭ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.

ಮೂಡುಬಿದರೆ : ಬಡ ಕುಟುಂಬಕ್ಕೆ ಆಸರೆಯಾದ ಪವರ್ ಫ್ರೆಂಡ್ಸ್

ಪವರ್ ಫ್ರೆಂಡ್ಸ್ ಬೆದ್ರ ಸೇವಾ ಯೋಜನೆಯಡಿ ಇರುವೈಲು ಗ್ರಾಮದ ಕಲ್ಲಾಡಿ ಎಂಬಲ್ಲಿನ ಬಡ ಕುಟುಂಬಕ್ಕೆ ಮನೆ ನಿರ್ಮಿಸಲಾಗಿದ್ದು, ಹಸ್ತಾಂತರ ಕಾರ್ಯಕ್ರಮ ಜೂನ್ 11ರಂದು ನಡೆಯಲಿದೆ ಎಂದು ಪವರ್ ಫ್ರೆಂಡ್ಸ್ ಬೆದ್ರ ಅಧ್ಯಕ್ಷ ವಿನಯ ಕುಮಾರ್ ತಿಳಿಸಿದರು. ಅವರು ಮೂಡುಬಿದರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಲ್ಲಾಡಿಯ ನೋಣಯ್ಯ ಪರವ ಎಂಬವರ ಬಡ ಕುಟುಂಬವು ಸಣ್ಣದಾದ ಮನೆಯಲ್ಲಿ ವಾಸವಾಗಿದ್ದರು. ಯಾವುದೇ ಮೂಲಭೂತ ಸೌಕರ್ಯಗಳು ಇರಲಿಲ್ಲ. ಇದನ್ನು ಮನಗಂಡು ಪವರ್

ಮೂಡುಬಿದಿರೆ : ಅಪಘಾತದಿಂದ ವಿದ್ಯಾರ್ಥಿಯ ಸಾವು – ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂಡುಬಿದಿರೆ: ಖಾಸಗಿ ಬಸ್ ಬೈಕ್‍ಗೆ ಢಿಕ್ಕಿ ಹೊಡೆದು ವಿದ್ಯಾರ್ಥಿ ಕಾರ್ತಿಕ್ ಆಚಾರ್ಯ ಮೃತಪಟ್ಟಿದ್ದು, ಚಾಲಕನ ನಿರ್ಲಕ್ಷ್ಯತನವನ್ನು ಖಂಡಿಸಿ ಮೂಡುಬಿದಿರೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ವಿದ್ಯಾಗಿರಿ ಜಂಕ್ಷನ್‍ನಲ್ಲಿ ಪ್ರತಿಭಟನೆ ನಡೆಸಿದರು. ಶಾಂತಿ ಪ್ರಸಾದ್ ಹೆಗ್ಡೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಖಾಸಗಿ ಬಸ್ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದಾಗಿ ಮೂಡುಬಿದಿರೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 10 ಕ್ಕೂ ಅಧಿಕ

ಬೈಕ್‌ಗೆ ಢಿಕ್ಕಿ ಹೊಡೆದ ಬಸ್‌: ಕಾಲೇಜು ವಿದ್ಯಾರ್ಥಿ ಸಾವು

ಮೂಡುಬಿದಿರೆ : ಖಾಸಗಿ ಬಸ್ಸೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ, ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ತೋಡಾರಿನ ಹಂಡೇಲು ಬಳಿ ಸೋಮವಾರ ಸಂಜೆ ನಡೆದಿದೆ. ಎಂಬಲ್ಲಿ ಖಾಸಗಿ ಬಸ್‌ ಬೈಕ್‌ಗೆ ಆಳ್ವಾಸ್‌ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಎಡಪದವು ರಾಜೇಶ್ವರೀ ಜ್ಯುವೆಲ್ಲ‌ರ್ಸ್ ನ ಚಂದ್ರಹಾಸ ಆಚಾರ್ಯ ಅವರ ಪುತ್ರ ಕಾರ್ತಿಕ್‌ ಆಚಾರ್ಯ ಮೃತಪಟ್ಟ ವಿದ್ಯಾರ್ಥಿ. ಸಹಸವಾರ ಅದೇ ಕಾಲೇಜಿನ ವಿದ್ಯಾರ್ಥಿ

ಆದರ್ಶ ಗ್ರಾಮಾಭಿವೃದ್ಧಿ ಸೇವಾ ಸಂಸ್ಥೆಯಿಂದ ವೃತ್ತಿ ಮಾರ್ಗದರ್ಶನ ಶಿಬಿರ

ಮೂಡುಬಿದಿರೆಯ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರವು ಸಮಾಜ ಮಂದಿರದಲ್ಲಿ ನಡೆಯಿತು. ಮಂಗಳೂರು ದಿಶಾ ಸೆಂಟರ್ ಫಾರ್ ಕ್ಯಾರಿಯರ್ ಕೌನ್ಸಿಲಿಂಗ್ ಆಂಡ್ ಟ್ರೈನಿಂಗ್ ನ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಶೆಟ್ಟಿ ಅವರು ವೃತ್ತಿ ಮಾರ್ಗದರ್ಶನದ ಕುರಿತು ಮಾತನಾಡಿ ಜೀವನದಲ್ಲಿ ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು. ಗುರಿಯನ್ನಿಟ್ಟುಕೊಂಡರೆ ಸಾಲದು ಅದನ್ನು ತಲುಪಲು ಸತತ

ನೇತಾಜಿ ಬ್ರಿಗೇಡ್ ನಿಂದ 120 ನೇ ವಾರದ ಸ್ವಚ್ಛತಾ ಅಭಿಯಾನ

ಮೂಡುಬಿದಿರೆ: ನೇತಾಜಿ ಬ್ರಿಗೇಡ್ (ರಿ.) 120 ನೇ ವಾರದ ಸ್ವಚ್ಛತಾ ಅಭಿಯಾನವು ಶ್ರೀ ಮಂಜುನಾಥ ಪ್ರೌಢ ಶಾಲೆ ಪ್ರಾಂತ್ಯ ಶಾಲೆಯಲ್ಲಿ ನಡೆಯಿತು. ಶಾಲಾ ಪ್ರಮುಖರಾದ ವಿನ್ಸೆಂಟ್, ಶಾಲಾ ಎಸ್ ಡಿ ಎಂ ಸಿ ಪ್ರಮುಖರಾದ ಜಿತೇಶ್ ಲಾಡಿ, ನೇತಾಜಿ ಬ್ರಿಗೇಡ್ ಸಂಚಾಲಕರಾದ ರಾಹುಲ್ ಕುಲಾಲ್ ಪದಾಧಿಕಾರಿಗಳಾದ ಆನಂದ ಕುಲಾಲ್, ಅಭಿಷೇಕ್ ಸಾಲಿಯಾನ್, ಶಶಿಕುಮಾರ್, ನಿತ್ಯಾನಂದ ಕೊಡಂಗಲ್ಲು, ಸಂದೇಶ್ ಕುಂದರ್, ದಯಾನಂದ ನಾಯ್ಕ್, ಪ್ರಸಾದ್, ನಿತ್ಯಾನಂದ,ಸಂತೋಷ್, ನಿತಿನ್ ಭಟ್ ,ಶರಣ್

ಹಗ್ಗಜಗ್ಗಾಟ: ಆಳ್ವಾಸ್ ಮಹಿಳೆಯರು ಚಾಂಪಿಯನ್, ಪುರುಷರ ತಂಡ ರನ್ನರ್ ಅಪ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಹಗ್ಗ ಜಗ್ಗಾಟದ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ ಹಾಗೂ ಪುರುಷರ ತಂಡವು ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ.ಮಹಿಳೆಯರ ಫೈನಲ್‌ನಲ್ಲಿ ಆಳ್ವಾಸ್ ಕಾಲೇಜು ತಂಡವು ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಸೋಲಿಸಿದ್ದರೆ, ಸೆಮಿಫೈನಲ್‌ನಲ್ಲಿ ಉಜಿರೆ ಎಸ್‌ಡಿಎಂ ಕಾಲೇಜು ವಿರುದ್ಧ ಜಯ

ಮೂಡುಬಿದಿರೆ: ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ  ಕ್ರಮ

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿರುವ, ಹೆಲ್ಮೆಟ್ ಧರಿಸದ, ಚಾಲನ ಅನುಜ್ಞಾ ಪತ್ರವಿಲ್ಲದೆ ಚಾಲನೆಯನ್ನು ಮಾಡುತ್ತಿರುವವರ ವಿರುದ್ಧ ಮೂಡುಬಿದಿರೆ ಪೊಲೀಸರು  ಕ್ರಮಕೈಗೊಂಡರು.