ಟೋಕಿಯೊ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಕೊನೆಯ ದಿನವಾದ ರವಿವಾರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ (ಎಸ್‌ಎಚ್-6)ನಲ್ಲಿ ಭಾರತದ ಕೃಷ್ಣ ನಾಗರ್ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಕೂಟದಲ್ಲಿ ಇದು ಭಾರತಕ್ಕೆ ಐದನೇ ಚಿನ್ನದ ಪದಕವಾಗಿದೆ. ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ ಎಚ್ 6 ವಿಭಾಗದಲ್ಲಿ ಭಾರತದ ಕೃಷ್ಣ ನಾಗರ್ ಅವರು ಚಿನ್ನದ ಪದಕ
ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್ 4 ಫೈನಲ್ ನಲ್ಲಿ ಅಗ್ರ ಶ್ರೇಯಾಂಕದ ಫ್ರಾನ್ಸ್ ಆಟಗಾರ ಲುಕಾಸ್ ಮಝೂರ್ ಅವರ ವಿರುದ್ಧ ತೀವ್ರ ಹೋರಾಟ ನೀಡಿದ ಹೊರತಾಗಿಯೂ 1-2 (21-15, 17-21, 15-21) ಅಂತರದಿಂದ ಸೋತಿರುವ ಭಾರತದ ಐಎಎಸ್ ಅಧಿಕಾರಿ ಹಾಗೂ ನೊಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕವನ್ನು ಗೆದ್ದುಕೊಂಡು ಹೊಸ ಇತಿಹಾಸ ನಿರ್ಮಿಸಿದರು. ಸುಹಾಸ್ ಇವರು ಕರ್ನಾಟಕ ಮೂಲದ ಐಎಎಸ್ ಅಧಿಕಾರಿ.