ಸಮಾಜದ ಸ್ವಾಸ್ತ್ಯ ಕಾಪಾಡುವ ಅತ್ಯ0ತ ಗುರುತರ ಜವಾಬ್ದಾರಿ ಇರುವ ವೃತ್ತಿ ಶಿಕ್ಷಕ ವೃತ್ತಿ: ಶಾಸಕಿ ಭಾಗೀರಥಿ ಮುರುಳ್ಯ
ಸುಳ್ಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಲೀಲಾವತಿ ರಾಘವ ಗೌಡ ಮತ್ತು ಜಾನಕಿ ವೆಂಕಪ್ಪ ಗೌಡ ಇವರುಗಳನ್ನು ಅವರ ನಿವಾಸದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ. ಬಿ. ಕೆ. ಮಾಜಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಪುಷ್ಪಾವತಿ ಬಾಳಿಲ,ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ, ಮಹಿಳಾ ಮೋರ್ಚಾ ಸದಸ್ಯೆ ಮತ್ತು ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಜಾನಕಿ ಮುರುಳ್ಯ, ಎಡ ಮಂಗಲ ಉಪಾಧ್ಯಕ್ಷರು ದಿವ್ಯ ಯೋಗಾನಂದ,ಮಹಿಳಾ ಮೋರ್ಚಾ ಸದಸ್ಯೆ ಆಶಾ ರೈ ಕಲಾಯಿ, ಮುರುಳ್ಯ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪುಷ್ಪಲತಾ ,ಮಾಜಿ ಗ್ರಾಮಪಂಚಾಯತಿ ಸದಸ್ಯೆ ಸುಧಾರಾಣಿ , ಬಿಜೆಪಿ ಕಾರ್ಯಕ ರ್ತರುಗಳಾದ ನೀಲಾವತಿ ತೋಟ, ನಿರ್ಮಲ ಹನಿಗುಂದಿ,ಮನೆಯವರಾದ ಮೈನಾ ಮತ್ತು ಕುಸುಮಾಧರ, ಯತೀಶ್ ಮತ್ತು ಮಧು,ವೆಂಕಪ್ಪ ಮಾಸ್ಟರ್ ಅಲಾಜೆ ಮುಂತಾದ ಪ್ರಮುಖರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.