ಬೈಂದೂರು: ಗೋಮಾಳ ಜಾಗ ಸರ್ವೇ ಪೂರ್ಣಗೊಳಿಸಿದ ಗ್ರಾ.ಪಂ. ಪಿಡಿಒಗಳ ಜತೆ ಶಾಸಕ ಗುರುರಾಜ್ ಗಂಟಿಹೊಳೆ ಸಭೆ

ಬೈಂದೂರು: ಕ್ಷೇತ್ರವ್ಯಾಪ್ತಿಯ ಗೋಮಾಳ ಸರ್ವೇ ನಡೆಸುವ ಕಾರ್ಯ ಆದಷ್ಟುಬೇಗ ಪೂರ್ಣಗೊಳಿಸಬೇಕು ಹಾಗೂ ಮುಂದಿನ ಒಂದು ತಿಂಗಳೊಳಗೆ ಕನಿಷ್ಠ ಒಂದಾದರೂ ಗೋ ಶಾಲೆ ನಿರ್ಮಿಸಬೇಕು ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ನಿರ್ದೇಶಿಸಿದರು.
ಗೋಮಾಳ ಸರ್ವೇ ಆದ ಗ್ರಾಮ ಪಂಚಾಯತಿಗಳ ಪಿಡಿಒ ಜೊತೆ ಸಭೆ ನಡೆಸಿದ ಶಾಸಕರು, ಸುಮಾರು 80 ಪ್ರತಿಶತ ತಯಾರಿಯಲ್ಲಿರುವ ನಾಡ ಗೋಮಾಳದ ಬಗ್ಗೆ ಮೊದಲು ಚರ್ಚಿಸಿದರು.

ನಾಡದಲ್ಲಿ ನೀರಿಗಾಗಿ ಕೆರೆಯನ್ನು ಮಾಡಲಾಗಿದೆ ಮತ್ತು ಜೈವಿಕ ಬೇಲಿಯನ್ನು ಕೂಡ ನಿರ್ಮಿಸಲಾಗಿದೆ. ಜೈವಿಕ ಬೇಲಿಗೆ ಬಿದಿರು ಮತ್ತು ಸಿಹಿ ಹುಣಸೆ ಗಿಡಗಳನ್ನು ನೆಡಲಾಗುವುದು ಎಂದು ಸೋಶಿಯಲ್ ಫಾರೆಸ್ಟ್ ಅಧಿಕಾರಿಗಳು ತಿಳಿಸಿದರು.
ದನಗಳ ಆಹಾರದ ದೃಷ್ಟಿಯಿಂದ ಕೂಡ ಚರ್ಚಿಸಲಾಯಿತು. ನರೇಗಾ ಯೋಜನೆಯಲ್ಲಿ ಸುಮಾರು 35 ಲಕ್ಷ ಹಣ ಗೋಶಾಲೆ ಶೆಡ್ ನಿರ್ಮಾಣಕ್ಕೆ ಮೀಸಲಿದ್ದು ಇದನ್ನು ಉಪಯೋಗಿಸಲು ಕ್ರಿಯಾಯೋಜನೆಯನ್ನು ತಯಾರಿ ಮಾಡಲು ತಿಳಿಸಲಾಯಿತು.
ನಂತರ ಹೇರೂರು ಗ್ರಾಮ ಪಂಚಾಯಿತಿ ಪಿಡಿಒ ಕೂಡ ತಮ್ಮ ಗ್ರಾಮದ ಗೋಮಾಳದ ಸುತ್ತ ತಾತ್ಕಾಲಿಕ ಧರೆ ನಿರ್ಮಿಸಿರುವುದಾಗಿ ತಿಳಿಸಿದರು.
ಕಂಬದಕೋಣೆ ಗೋಮಾಳದಲ್ಲಿ ಅಕೇಶಿಯ ಮರಗಳಿದ್ದು ಅವುಗಳ ಕಠೋವಿನ ಕುರಿತು ಚರ್ಚಿಸಲಾಯಿತು.
ಕೊಲ್ಲೂರು ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಗೋಮಾಳದ ಕೆಲಸದ ಪ್ರಗತಿಯ ಬಗ್ಗೆ ಚರ್ಚಿಸಲಾಯಿತು ಮತ್ತು ಕೆಲಸದ ಗತಿಯನ್ನು ಹೆಚ್ಚಿಸುವಂತೆ ತಿಳಿಸಲಾಯಿತು.


ದನಗಳ ಆಹಾರದ ದೃಷ್ಟಿಯಿಂದ ಯಾವೆಲ್ಲ ಗಿಡಗಳು ಹೆಚ್ಚು ಸೂಕ್ತ ಎನ್ನುವುದರ ಬಗ್ಗೆ ಪಶು ವೈದ್ಯಾಧಿಕಾರಿಗಳಲ್ಲಿ ಚರ್ಚಿಸಲಾಯಿತು.
ಜೈವಿಕ ಬೇಲಿಗಳನ್ನು ನಿರ್ಮಿಸುವ ದೃಷ್ಟಿಯಿಂದ ಸೋಶಿಯಲ್ ಫಾರೆಸ್ಟ್ ನವರು ಒಟ್ಟು ಗೋಮಾಳದ ಸುತ್ತಳತೆಯನ್ನು ಎಲ್ಲಾ ಪಂಚಾಯತ್ ನವರು ನೀಡುವಂತೆ ಕೇಳಿಕೊಂಡರು.ಸರ್ವೇ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

Related Posts

Leave a Reply

Your email address will not be published.