HomeFresh Newsನೇಪಾಳದ ಸಂಸತ್ ಚುನಾವಣೆಯ ಮತ ಎಣಿಕೆ ನಡೆದಿದ್ದು ಬಹುತೇಕ ಬಾಲೆನ್ ಶಾ ಅವರ ರಾಷ್ಟ್ರೀಯ ಸ್ವತಂತ್ರ...

ನೇಪಾಳದ ಸಂಸತ್ ಚುನಾವಣೆಯ ಮತ ಎಣಿಕೆ ನಡೆದಿದ್ದು ಬಹುತೇಕ ಬಾಲೆನ್ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷವು ಗೆಲುವಿನತ್ತ ಗಟ್ಟಿ ಹೆಜ್ಜೆ


ನೇಪಾಳದಲ್ಲಿ ಅರ್ಧ ವರುಷದ ಹಿಂದೆ ಜೆನ್ ಜೆಡ್ ಯುವಜನ ಚಳವಳಿ ನಡೆದು ಆಳುವವರನ್ನು ಉರುಳಿಸಿತ್ತು. ಈಗ ಮತ್ತೆ ಸಂಸತ್ತಿಗೆ ಚುನಾವಣೆ ನಡೆದು ಮತ ಎಣಿಕೆ ನಡೆದಿದೆ. ಜೆನ್ ಜೆಡ್ ಚಳವಳಿಯ ಬಾಲೆನ್ ಶಾ ಅವರ ಬೆಂಬಲದ ಆರ್‌ಎಸ್‌ಪಿ- ರಾಷ್ಟ್ರೀಯ ಸ್ವತಂತ್ರ ಪಕ್ಷವು ಗೆಲುವಿನತ್ತ ಹೆಜ್ಜೆ ಹಾಕಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಆರ್‌ಎಸ್‌ಪಿಯು 93 ಕ್ಷೇತ್ರಗಳಲ್ಲಿ ಗೆಲುವಿನ ಸಮೀಪ ಬಂದಿದೆ.


ಕಾಠ್ಮಂಡು 1ರಲ್ಲಿ ಆರ್‌ಎಸ್‌ಪಿಯ ರಂಜು ನ್ಯೂಪನೆ ಗೆದ್ದಿದ್ದಾರೆ. ಮಾಜೀ ಪ್ರಧಾನಿ ಸಿಪಿಎನ್- ಯುಎಂಎಲ್‌ನ ಕೆ. ಪಿ. ಶರ್ಮಾ ಓಲಿ ಮುನ್ನಡೆಯಲ್ಲಿ ಇದ್ದಾರೆ. ಮಾಜೀ ರ್‍ಯಾಪ್ಪರ್ ಬಾಲೆನ್ ಶಾ ಅವರು ಜಾಲ ತಾಣಗಳ ಮೂಲಕ ಜನಪ್ರಿಯರಾಗಿದ್ದರು. ಅವರ ಹಿಂದೆ ದೊಡ್ಡ ಯುವಕರ ದಂಡು ಇದೆ. ಜೆನ್ ಜೆಡ್ ಚಳವಳಿ ಆ ಯುವಕರ ದಂಡಿನಿಂದಾಗಿಯೇ ಯಶಸ್ಸು ಕಂಡಿತ್ತು.


ನೇಪಾಳದ ಸಂಸತ್ತು 275 ಸ್ಥಾನಗಳನ್ನು ಹೊಂದಿದೆ. 165 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತದೆ. 110 ಸ್ಥಾನಗಳನ್ನು ಪಕ್ಷಗಳು ಪಡೆದ ಮತ ಪ್ರಮಾಣದ ಮೇಲೆ ಆಯಾ ಪಕ್ಷಗಳಿಂದ ನೇಮಕ ಮಾಡಿಕೊಳ್ಳಲಾಗುತ್ತದೆ. ೬೫ ಪಕ್ಷಗಳು ಸ್ಪರ್ಧೆಯಲ್ಲಿ ಇವೆ; ಅವುಗಳಲ್ಲಿ ಏಳು ಪ್ರಮುಖ ಪಕ್ಷಗಳಾಗಿವೆ. ಆದರೆ ಆರ್‌ಎಸ್‌ಪಿ ಅವೆಲ್ಲವುಗಳಿಗಿಂತ ಮುಂದಿರುವುದು ಸ್ಪಷ್ಟವಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments