ಪ್ರಪಂಚದ 23 ಶೇಕಡಾ ರಾಸ್ಪ್ ಬೆರಿ ಉತ್ಪಾದಕ ದೇಶ ರಶಿಯಾ; ಅದರ ಉತ್ಪನ್ನಗಳ ರಫ್ತಿನಲ್ಲಿ ಕೂಡ ಅಗ್ರ ದೇಶವಾಗಿದೆ.

ಬ್ಲೂಬೆರಿ ಹಣ್ಣು ಕೊಯ್ಯುವಾಗ ತೊಟ್ಟು ಗುಂಜಿ ಹಣ್ಣಿನಲ್ಲಿ ಉಳಿಯುತ್ತದೆ. ರಾಸ್ಪ್ ಬೆರಿ ಕೊಯ್ಯುವಾಗ ಅದರ ತೊಟ್ಟು ಗುಂಜಿ ಕಳಚಿಕೊಂಡು ಹಣ್ಣಿನ ನಡುವೆ ತೂತು ತೋರುತ್ತದೆ. ರಶಿಯಾ ವರುಷದಲ್ಲಿ 9.5 ಲಕ್ಷ ಟನ್ ರಾಸ್ಪ್ ಬೆರಿ ಬೆಳೆಯುತ್ತದೆ; ಇದು ಲೋಕದ 23 ಶೇಕಡಾ ಆಗಿದೆ.

ರಾಸ್ಪ್ ಬೆರಿ ನೇರ ತಿನ್ನುವುದಲ್ಲದೆ ಒಣಗಿಸಿ, ಪೇಸ್ಟ್ ಮಾಡಿ, ರಸ ತೆಗೆದು ಸಂಸ್ಕರಿಸಿ ಬಳಸುತ್ತಾರೆ; ಅಡುಗೆಯಲ್ಲಿ ನೇರ ಬಳಕೆಯೂ ಇದೆ.
1555ರಲ್ಲಿ ಸ್ಕಾಟ್‌ಲ್ಯಾಂಡಿನಲ್ಲಿ, 1602 ರಲ್ಲಿ ಇಂಗ್ಲಿಷ್ ಮುದ್ರಿತ ಪುಸ್ತಕದಲ್ಲಿ ರಾಸ್ಪ್ ಬೆರಿ ನುಡಿ ಬಂದಿದೆ. ಕೆಂಪು ಬಣ್ಣದವು ಅಧಿಕ. ಆದರೆ ಹಳದಿ, ಕೆನ್ನೇರಳೆ, ಕಪ್ಪು ರಾಸ್ಪ್ ಬೆರಿ ತಳಿಗಳು ಕೂಡ ಇವೆ; ಹೈಬ್ರೀಡ್‌ಗಳು ಬಂದಿವೆ.

ರಾಸ್ಪ್ ಬೆರಿಯಲ್ಲಿ 86 ಶೇಕಡಾ ನೀರು ಇದೆ. ಉಳಿದಂತೆ ಕಾರ್ಬೊಹೈಡ್ರೇಟ್, ಪ್ರೋಟೀನ್, ಕೊಬ್ಬಿನಂಶ, ನಾರುಸತ್ವ, ಮ್ಯಾಂಗನೀಸ್, ವಿಟಮಿನ್ ಸಿ ಮೊದಲಾದವು ಇವೆ.
ಇದರ ಹಸಿ ಎಲೆ ಇಲ್ಲವೇ ಒಣ ಎಲೆಯಿಂದ ಚಾ ಮಾಡಿ ಕುಡಿಯುವರು. ಈ ಕಷಾಯವನ್ನು ಮನೆ ಮದ್ದು ಎಂದು ಕೂಡ ಹೇಳುವರು.

