HomeFresh Newsಉಡುಪಿ: ಅನಧಿಕೃತ ಬ್ಯಾನರ್ ಗಳ ತೆರವು ಕಾರ್ಯ

ಉಡುಪಿ: ಅನಧಿಕೃತ ಬ್ಯಾನರ್ ಗಳ ತೆರವು ಕಾರ್ಯ

ಶಿವಮೊಗ್ಗ ಗಲಭೆಯ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ಹಾಗೂ ಅವಧಿ ಮೀರಿದ ಬ್ಯಾನರ್ ಮತ್ತು ಕಟೌಟ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಗರಸಭೆಯ ಅಧಿಕಾರಿಗಳು ಪೆÇಲೀಸ್ ರಕ್ಷಣೆಯಲ್ಲಿ ನಡೆಸಿದರು.

ನಗರಸಭೆಯಿಂದ ಅನುಮತಿ ಪಡೆಯದೆ ಉಡುಪಿ ನಗರ, ಸಂತೆಕಟ್ಟೆ ಹಾಗೂ ಮಣಿಪಾಲ ಸೇರಿದಂತೆ ನಗರ ಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಹಾಗೂ ಅವಧಿ ಮೀರಿದ ಒಟ್ಟು 85 ಅನಧಿಕೃತ ಬ್ಯಾನರ್ ಹಾಗೂ ಕಟೌಟ್‍ಗಳನ್ನು ತೆರವುಗೊಳಿಸಲಾಯಿತು.

ಅ. 10ರಂದು ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಿರುವ ಹಿಂದೂ ಸಮಾಜೋತ್ಸವಕ್ಕೆ ಸಂಬಂಧಿಸಿದ ಬ್ಯಾನರ್‍ಗಳನ್ನು ಅನುಮತಿ ಪಡೆಯದೆ ಅಳವಡಿಸಿದ್ದು, ಅವುಗಳನ್ನೂ ತೆರವುಗೊಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments