ಮನೆ ಮನೆಗೆ ನೀರು ವಿತರಣೆ : ಕೊಡವೂರು ವಾರ್ಡ್ ನಲ್ಲೊಂದು ಮಾದರಿ ಸೇವೆ

ಉಡುಪಿ : ಈ ಬಾರಿ ಪೂರ್ವ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ರಾಜ್ಯದ ಹಲವು ಭಾಗಗಳು ಸೇರಿದಂತೆ ಉಡುಪಿ ಜಿಲ್ಲೆಗೂ ಬಿಸಿ ತಟ್ಟಿದೆ. ಆದ್ದರಿಂದ ಉಡುಪಿ ನಗರಸಭೆಯ ನೀರನ್ನೇ ಅವಲಂಬಿಸುವ ಸಂಕಷ್ಟ ಎದುರಾಗಿದೆ. ಆದರೆ ಇದೀಗ ಉಡುಪಿ ನಗರಸಭೆ ಕೂಡ ಸಮರ್ಪಕ ನೀರು ಪೂರೈಸಲು ವಿಫಲಗೊಂಡಿದೆ. ಆದರೆ ಉಡುಪಿ ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಅವರ ನೇತೃತ್ವದಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ಕಾರ್ಯ ಉಡುಪಿಯ ಕೊಡವೂರಿನಲ್ಲಿ ನಡೆಯುತ್ತಿದೆ. ಈ ಮೂಲಕ ತನ್ನ ಕೊಡವೂರು ವಾರ್ಡಿಗೆ ನೀರಿನ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಒಂದು ಪುಟ್ಟದಾಗಿರುವ ಸಮಿತಿಯನ್ನು ರಚನೆ ಮಾಡಿ ನೀರಿನ ಸಮಸ್ಯೆ ಬಂದಾಗ ತಿಳಿಸಿದರೆ ಟ್ಯಾಂಕರ್ ನ ಮುಖಾಂತರ ನೀರು ಕೊಡುವಂತ ವ್ಯವಸ್ಥೆ ಕೊಡವೂರು ವಾರ್ಡಿನಲ್ಲಿ ನಡೆಯುತ್ತಿದೆ. ಈ ಮುಖಾಂತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರಲ್ಲಿ ಕೊಡುವೂರಿನಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ನಡೆದಿದ್ದು ಪಂಪ್ ಆಪರೇಟರ್ ಆಗಿರುವಂತಹ ದಾಮೋದರ್ ಮತ್ತು ನಿತೀಶ್ ಪಾಲಕಟ್ಟೆ ಇವರ ಕಾರ್ಯವು ಉತ್ತಮವಾಗಿ ನಡೆಯುತ್ತಿದೆ. ನೀರಿನ ಸಮಸ್ಯೆ ಇರುವವರು ಪೋನ್ ಮೂಲಕ ತಿಳಿಸಿದರೆ ಮರುದಿನ ಟ್ಯಾಂಕರ್ ಮುಖಾಂತರ ವಿಜಯ್ ಕೊಡವೂರು ಮುಂದಾಳತ್ವದಲ್ಲಿ ನೀರು ಪೂರೈಸುವ ಅಚ್ಚುಕಟ್ಟಿನ ಕಾರ್ಯ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಂದಲ್ಲಿ, ಕಾರ್ಯಕರ್ತರಿಗೆ ತಿಳಿಸಿದರೆ ನೀರಿನ ವ್ಯವಸ್ಥೆ ಮಾಡುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

Related Posts

Leave a Reply

Your email address will not be published.