‘ಎಚ್ಇಎಫ್’ ರಾಷ್ಟ್ರೀಯ ಮಟ್ಟದ ಸಮ್ಮೇಳನ : ಯಶ್ ಪಾಲ್ ಸುವರ್ಣ ಭಾಗಿ
ಮಣಿಪಾಲದ ವ್ಯಾಲಿ ವ್ಯೂ ನಲ್ಲಿ ಹಿಂದೂ ಎಕನಾಮಿಕ್ ಫೋರಮ್ ರಾಷ್ಟ್ರೀಯ ಮಟ್ಟದ ಸಮ್ಮೇಳನವು ಮೇ 28, 2023 ರ ಭಾನುವಾರದಂದು ಜರುಗಿತ್ತು. ಈ ಸಮ್ಮೇಳನದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಯಶ್ ಪಾಲ್ ಸುವರ್ಣ ಭಾಗವಹಿಸಿ, ಸಭೆಯನ್ನುದ್ದೇಶಿಸಿ ಮಾಡನಾಡಿ ಶುಭಹಾರೈಸಿದರು. ಸಮ್ಮೇಳನದಲ್ಲಿ 200 ಕ್ಕೂ ಅಧಿಕ ವ್ಯಾಪಾರೋದ್ಯಮಿಗಳು ಭಾಗವಹಿಸಿದ್ದು, ಹಿಂದೂ ಆರ್ಥಿಕತೆಯ ಅಭಿವೃದ್ದಿಗೆ ಹೊಸ ರೂಪ ಸಿಕ್ಕಿದೆ. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ವಿಗ್ಯಾಆನಂದ್ ಸ್ವಾಮೀಜಿ, ಹಿಂದೂ ಎಕನಾಮಿಕ್ ಫೋರಮ್ ಉಡುಪಿ ಘಟಕದ ಅಧ್ಯಕ್ಷರಾದ ಶಿರಿಯಾರ್ ಗಣೇಶ್ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಿನೇಶ್ ಸಾಮಂತ್, ಸoಯೋಜಕರಾದ ಕು. ರಶ್ಮಿ ಸಾಮಂತ್, ಶಿವಪ್ರಸಾದ್ ಟಿ. ಆರ್ ಮತ್ತಿತರು ಉಪಸ್ಥಿತರಿದ್ದರು.