ವಿನಾಯಕ ಬಾಳಿಗಾ ಕೊಲೆ ಪ್ರಕರಣ : ಮೆರವಣಿಗೆ

ಆರ್.ಟಿ.ಐ ಹಾಗೂ ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆ ನಡೆದು7 ವರ್ಷಗಳಾದರೂ ನಿಧಾನಗತಿಯಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪ್ರತಿಭಟಿಸಿ ಮಂಗಳವಾರ ಸಂಜೆ ಮಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಎದುರಿನಿಂದ ವಿನಾಯಕ ಬಾಳಿಗರ ಮನೆ ತನಕ ಮೆರವಣಿಗೆ ಸಾಗಿತು.ಮೆರವಣಿಗೆಯಲ್ಲಿ ವಿನಾಯಕ ಬಾಳಿಗಾ ಸಹೋದರಿ ರಾಧಾ ಬಾಳಿಗಾ , ಪ್ರೊ.ನರೇಂದ್ರ ನಾಯಕ್ , ಎಂ.ದೇವದಾಸ್ , ರಘು ಎಕ್ಕಾರ್ , ಮಂಜುಳಾ ನಾಯಕ್ , ಸಂತೋಷ್ ಬಜಾಲ್ , ಯೋಗೀಶ್ ನಾಯಕ್ , ಪದ್ಮನಾಭ ಅಮೀನ್ , ಮಹಮ್ಮದ್ ಕುಂಜತ್ತಬೈಲ್ , ಸಂಜನಾ , ಪ್ರಮೀಳಾ , ಸಮರ್ಥ್ ಭಟ್ , ಜೆರಾರ್ಡ್ ಟವರ್ಸ್ ಮೊದಲಾದವರು ಭಾಗವಹಿಸಿದ್ದರು.

Related Posts

Leave a Reply

Your email address will not be published.