ತೂಫಾನ್ ವೇಗದಲ್ಲಿ ಪ್ರಾಣಕ್ಕೆ ಕಂಟಕ ತರುವ ಎಚ್ಚರಗೇಡಿ ಪ್ರಯಾಣ

ಉಡುಪಿ ಜಿಲ್ಲೆಯ ಮೂಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಪ್ರವಾಸಿಗರು ತೂಫಾನ್ ವಾಹನದಲ್ಲಿ ನೇತಾಡಿಕೊಂಡು ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ವಾಹನದ ಒಳಗೆ ಭರ್ತಿ ಜನರನ್ನು ತುಂಬಿಸಿಕೊಂಡು, ಜೀವಕ್ಕೆ ಅಪಾಯ ತರುವಂತೆ ವಾಹನದ ಮೇಲ್ಭಾಗದಲ್ಲಿ ಮತ್ತು ಸ್ಪೇರ್ ಟೈರ್ ಮೇಲೆ ಕುಳಿತು ನೇತಾಡುತ್ತಾ ನಿರ್ಲಕ್ಷ್ಯವಾಗಿ ವಾಹನದಲ್ಲಿ ಸಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೈವೇ ನಲ್ಲಿ ಪ್ರವಾಸಿಗರ ತೀರ ಬೇಜವಾಬ್ದಾರಿ ವರ್ತನೆಗೆ ಸಾರ್ವಜನಿಕರು ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.