ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನೆ

ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇದರ 13ನೇ ನೂತನ ಶಾಖೆಯು ಬಂಟ್ವಾಳ ತಾಲೂಕಿನ ಪೆರ್ನೆ ಚಂದ್ರ ಆರ್ಕೇಡ್ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ. ಜೂನ್ 4ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪರಮಪೂಜ್ಯ ಶ್ರಿ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದೀಪ ಪ್ರಜ್ವಲನೆ ಹಾಗೂ ಅಶೀರ್ವಚನ ನೀಡಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕಚೇರಿ ಉದ್ಘಾಟಿಸಲಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ರಮಾನಾಥ ರೈ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಬನ್ನೂರು ಸಂತ ಅಂತೋನಿಯವರ ಚರ್ಚ್‍ನ ಧರ್ಮಗುರುಗಳಾದ ರೇ.ಫಾ ಬಾಲ್ತರಾಜ್ ಕಂಪ್ಯೂಟರ್ ಉದ್ಘಾಟನೆ, ಪೆರ್ನೆ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ಲಾ ಹಮೀದಿ ಪ್ರಥಮ ಠೇವಣಿ ಪತ್ರಗಳ ಬಿಡುಗಡೆ ಮಾಡಲಿದ್ದಾರೆ. ಪೆರ್ನೆ ಗ್ರಾ.ಪಂ. ಅಧ್ಯಕ್ಷರಾದ ಸುನೀಲ್ ನೆಲ್ಸನ್ ಪಿಂಟೋ ನಿತ್ಯನಿಧಿ ಠೇವಣಿ ಬಿಡುಗಡೆ ಮಾಡಲಿದ್ದಾರೆ. ಇನ್ನುಳಿದಂತೆ ಅತಿಥಿ ಗಣ್ಯರು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
