ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ || ಐಸ್‌ ಕರ್ವಿಂಗ್‌ ಕಾರ್ಯಗಾರ

ಮಂಗಳೂರು: ಶ್ರೀನಿವಾಸ್ ಯುನಿವರ್ಸಿಟಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಟೂರಿಸಂ ಐಸ್‌ ಕರ್ವಿಂಗ್‌ ಕಾರ್ಯಗಾರವು ಕಾಲೇಜಿನ ಪ್ರಾಂಗಣದಲ್ಲಿ ಆಗಸ್ಟ್ 5 ರಂದು ಆಯೋಜಿಸಲಾಯಿತು.
ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ನ ಸಹಾಯಕ ಪ್ರಾಧ್ಯಾಪಕರಾದ ಶೈಲೇಶ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಹೋಟೇಲ್‌ ಹಾಗೂ ಫುಡ್‌ ಸರ್ವಿಸ್‌ ಕ್ಷೇತ್ರದಲ್ಲಿ ಐಸ್‌ ಕರ್ವಿಂಗ್‌ನ ಮಹತ್ವದ ಕುರಿತು ತಿಳಿಸಿದರು. ಈ ವೇಳೆ ವೃತ್ತಿಪರವಾಗಿ ವಿವಿಧ ಶೈಲಿ ಮತ್ತು ಆಕಾರಗಳಲ್ಲಿ ಐಸ್ ಶಿಲ್ಪಗಳ ಕೆತ್ತನೆ ಮಾಡಲು ಬೇಕಾದ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಐಸ್ ಶಿಲ್ಪಗಳ ಕೆತ್ತನೆಯನ್ನು ಸಂಪೂರ್ಣಗೊಳಿಸಲು ಸಕ್ರಿಯವಾಗಿ ಕೈ ಜೋಡಿಸಿದರು.ಕಾಲೇಜಿನ ಡೀನ್ ಪ್ರೊ. ಸ್ವಾಮಿನಾಥನ್ ಸ್ವಾಗತಿಸಿ ಬಿಎಚ್‌ಎಮ್‌ಸಿಟಿ 4 ನೇ ಸೆಮಿಸ್ಟರ್ ವಿದ್ಯಾರ್ಥಿ ಮೊಹಮ್ಮದ್ ಶಾಹಿರ್ ವಂದಿಸಿದರು.ಕಾರ್ಯಾಗಾರವನ್ನು ಆಹಾರ ಉತ್ಪಾದನಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್ ಪ್ರಭು ಆಯೋಜಿಸಿದ್ದರು.

Related Posts

Leave a Reply

Your email address will not be published.