ಸೋಮ್ ಭಾಯ್ ಮೋದಿ ಅವರಿಂದ ಉಡುಪಿ ಪ್ರಸಾದ್ ನೇತ್ರಾಲಯದ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯ ವಿಭಾಗಗಳ ಉದ್ಘಾಟನೆ

ಉಡುಪಿಯಲ್ಲಿರುವ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮವು ನ.21ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡುವರು. ವಿದ್ವಾನ್ ಕಬಿಯಾಡಿ ಜಯರಾಮ್ ಅಚಾರ್ಯ ಶುಭಾಂಸನೆಗೈಯಲಿದ್ದಾರೆ. ಅರ್ಥಾಪ್ಟಿಕ್ ಕ್ಲಿನಿಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಣ್ಣ ಗುಜರಾತ್ ವಾಡ್‍ನಗರದ ಸರ್ವೋದಯ ಸೇವಾ ಟ್ರಸ್ಟ್‍ನ ಅಧ್ಯಕ್ಷ ಸೋಮ್ ಬಾಯಿ ಮೋದಿ, ಲೋ ವಿಷನ್ ಕ್ಲಿನಿಕ್ ಅನ್ನು ಸಚಿವ ಸುನಿಲ್ ಕುಮಾರ್, ಮಕ್ಕಳ ಕಣ್ಣಿನ ಕ್ಲೀನಿಕ್‍ನ್ನು ಮಾಹೆ ವಿವಿಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು ಐ ಟ್ರೇಸ್‍ನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಉದ್ಘಾಟಿಸಲಿರುವರು. ಶಾಸಕ ಕೆ. ರಘುಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್, ಮುಂಬಯಿ ಬಿಜೆಪಿ ಕಾರ್ಯದರ್ಶಿ ಮೋಹನ್ ಗೌಡ, ಉದ್ಯಮಿ ಪುರುಷೋತ್ತಮ ಪಿ ಶೆಟ್ಟಿ ಭಾಗವಹಿಸಲಿರುವವರು ಎಂದು ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ತಿಳಿಸಿದ್ದಾರೆ.

Related Posts

Leave a Reply

Your email address will not be published.