HomeFresh Newsಮಿತ್ರಪಟ್ಟಣ ಮೊಗವೀರ ಸಮಾಜದ ವತಿಯಿಂದ ಸಮುದ್ರ ಪೂಜೆ

ಮಿತ್ರಪಟ್ಟಣ ಮೊಗವೀರ ಸಮಾಜದ ವತಿಯಿಂದ ಸಮುದ್ರ ಪೂಜೆ

ಮಂಗಳೂರು: ಮೀನುಗಾರಿಕಾ ಋತುವಿನ ಆರಂಭದಲ್ಲಿ ಸಮುದ್ರಪೂಜೆಯನ್ನು ಮಾಡುವ ಮೂಲಕ ಮತ್ಥ್ಯ ಸಂಪತ್ತನ್ನು ಕರುಣಿಸಲು ಮತ್ತು ಮೀನುಗಾರ ಬಂಧುಗಳ ಸುರಕ್ಷೆಗಾಗಿ ಪ್ರಾರ್ಥಿಸಿ ಮಿತ್ರಪಟ್ಟಣ ಮೊಗವೀರ ಮಹಾ ಸಮಾಜದ ವತಿಯಿಂದ ಸಮುದ್ರ ಪೂಜಾ ಕಾರ್ಯಕ್ರಮ ನಡೆಯಿತು.

ಸಮುದ್ರ ಪೂಜೆಯ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿಯವರು ಸಮುದ್ರಕ್ಕೆ ಹಾಲು ಹಾಕುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.ಈ ಸಂದರ್ಭದಲ್ಲಿ ಮಿತ್ರಪಟ್ಟಣ ಮೊಗವೀರ ಸಮಾಜದ ಅಧ್ಯಕ್ಷರಾದ ರವೀಂದ್ರ ಕರ್ಕೇರ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಸುರೇಶ್ ಕರ್ಕೇರ, ಸ್ಥಳೀಯ ಕಾರ್ಪೋರೇಟರ್ ಶೋಭಾ ರಾಜೇಶ್, ರಾಮ ಮಂದಿರದ ಅಧ್ಯಕ್ಷರಾದ ಪ್ರದೀಪ್ ಕುಂದರ್, ಊರಿನ ಗುರಿಕಾರರಾದ ಗಂಗಾಧರ್ ಗುರಿಕಾರ, ಹಿರಿಯರಾದ ದಿನಕರ್ ಎಂ, ಮಹಿಳಾ ಸಮಾಜದ ಅಧ್ಯಕ್ಷರಾದ ಕವಿತಾ ಶರತ್, ರಾಜೇಶ್ ಪುತ್ರನ್ ಮುಂಬೈ ಸಮಿತಿಯ ಹಿರಿಯರಾದ ನಾರಾಯಣ ಬಂಗೇರ ಮಿತ್ರಪಟ್ಟಣ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷರಾದ ವಸಂತ್ ಸುವರ್ಣ, ಪ್ರಮುಖರಾದ ಸುನಿಲ್ ಸಾಲಿಯಾನ್ ಹಾಗೂ ಮೊಗವೀರ ಸಮಾಜದ ಎಲ್ಲಾ ಬಾಂಧವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments