ಬೈಂದೂರು ಉತ್ಸವ-2024 ಕ್ರೀಡಾಕೂಟಕ್ಕೆ ಚಾಲನೆ
ಬೈಂದೂರು: ಬೈಂದೂರು ಉತ್ಸವ ಕ್ಷೇತ್ರದ ಅಭಿವೃದ್ಧಿ ಅವಕಾಶಗಳ ಕಲ್ಪನೆಯಲ್ಲಿ ಕಂಡ ಕನಸು. ಒಂದೆ ಬಾರಿ ಎಲ್ಲವು ಸಾಕಾರಗೊಳಿಸುವ ತರಾತುರಿ ನಮ್ಮದಲ್ಲ ಬದಲಾಗಿ ಈ ವರ್ಷ ಆರಂಭವಾದರೆ ಹಂತ ಹಂತವಾಗಿ ಅವಕಾಶಗಳನ್ನು ಜೋಡಿಸುವ ಮೂಲಕ ನಿರಂತರ ಸಂಭ್ರಮಿಸಬೇಕೆನ್ನುವುದೇ ಬೈಂದೂರು ಉತ್ಸವದ ಮೂಲ ಧೈಯವಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಅವರು ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಬೈಂದೂರು ಉತ್ಸವದ ಕಲ್ಪನೆ ಬೈಂದೂರಿಗೋಸ್ಕರ ಬೈಂದೂರು ಕ್ಷೇತ್ರದವರಿಗಾಗಿ ನಾವೇ ಉತ್ಸವ ಮಾಡ ಬೇಕೆನ್ನುವ ಹಂಬಲ.ಬೈಂದೂರು ಸಾವಿರಾರು ಜನರು ಜಗತ್ತಿನಾದ್ಯಂತ ಇದ್ದಾರೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧಿಸಿದ್ದಾರೆ ಆದರೆ ಬೈಂದೂರು ಅಭಿವೃದ್ಧಿ ಹೊಂದಲಿಲ್ಲ ಮುಂದೆ ಅಭಿವೃದ್ಧಿ ಹೊಂದಲು ಅವಕಾಶವಿದೆ ಅದಕ್ಕಾಗಿ ದೇಶ ವಿದೇಶಗಳಲ್ಲಿ ನೆಲೆಸಿರುವ ಬೈಂದೂರಿನವರನ್ನು ವೇದಿಕೆಗೆ ಕರೆ ತಂದು ಬೈಂದೂರಿನ ಬೆಳವಣಿಗೆಯನ್ನು ನೋಡಬೇಕೆನ್ನುವುದು ಈ ಬೈಂದೂರು ಉತ್ಸವದ ಉದ್ದೇಶ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಮೃದ್ದ ಬೈಂದೂರು ಅಧ್ಯಕ್ಷ ಬಿ.ಎಸ್.ಸುರೇಶ ಶೆಟ್ಟಿ ಉಪ್ಪುಂದ ಮಾತನಾಡಿ, ಬೈಂದೂರು ಉತ್ಸವ ಎನ್ನುವುದು ಜಾಗತಿಕ ಹೂಡಿಕೆದಾರರನ್ನು ಕರೆ ತಂದು ಆದ್ಯತೆ ಪಡೆಯುವಂತದ್ದು, ಕ್ಷೇತ್ರದ ತೆರೆಮರೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆಯನ್ನು ಒದಗಿಸಿದು,ಸರಕಾರದ ಸಚಿವರುಗಳನ್ನು ಕರೆಸಿ ನಮ್ಮ ದೃಷ್ಟಿಕೋನ ವಿಚಾರಧಾರೆಯನ್ನು ತಿಳಿಸಿ ಅವರ ಗಮನ ನಮ್ಮತ್ತ ಸೆಳೆಯುವಂತೆ ಮಾಡುವುದು, ಕೃಷಿ, ಮೀನುಗಾರಿಕೆ ಕೈಗಾರಿಕೆಗಳಿಗೆ ಪೂರಕವಾದ ಮಾಹಿತಿಯನ್ನು ಒದಗಿಸುವ ಮೂಲಕ ಬೈಂದೂರಿನ ಜನರಲ್ಲಿ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲಾಗುವುದು.
ಈ ಸಂದರ್ಭದಲ್ಲಿ ಉದ್ಯಮಿ ಜಿ.ಗೋಕುಲ ಶೆಟ್ಟಿ,ಜಯಾನಂದ ಹೋಬಳಿದಾರ್,ಗೌರಿ ದೇವಾಡಿಗ, ತಂಗಪ್ಪನ್,ಮಂಜುನಾಥ ಪೂಜಾರಿ ಸಸಿಹಿತ್ಲು, ಶ್ರೀಗಣೇಶ ಉಪ್ಪುಂದ, ಅನಿತಾ ಅರ್.ಕೆ,ಭಾಗೀರಥಿ ಸುರೇಶ್, ಸುರೇಂದ್ರ ಖಾರ್ವಿ ಉಪಸ್ಥಿತರಿದ್ದರು. ಪುಷ್ಪರಾಜ್ ಶೆಟ್ಟಿ ಶಿರೂರು ಸ್ವಾಗತಿಸಿ ವಂದಿಸಿದರು.