ಅದಮಾರು ಪದವಿ ಕಾಲೇಜಿಗೆ ಸಿಎಂ ಅವರಿಂದ ಶಿಲಾನ್ಯಾಸ

ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅದಮಾರಿನಲ್ಲಿ ಮಾತೃ ಸಂಸ್ಥೆಯ ಅಧ್ಯಕ್ಷ ವಿಶ್ವಪ್ರೀಯ ತೀರ್ಥರ ಸಮಕ್ಷಮದಲ್ಲಿ ನೆರವೇರಿಸಿದ್ದಾರೆ.


ಆರಂಭದಲ್ಲಿ ಅದ್ಧೂರಿಯಾಗಿ ಮುಖ್ಯಮಂತ್ರಿಗಳನ್ನು ಶಿಲಾನ್ಯಾಸ ಪ್ರದೇಶಕ್ಕೆ ಬರಮಾಡಿಕೊಳ್ಳಲಾಯಿತು.

ಶಿಲಾನ್ಯಾಸ ಸಹಿತ ನಾಮಫಲಕ ಅನಾವರಣದ ಬಳಿಕ ವಿದ್ಯಾಸಂಸ್ಥೆಯ ರಾಜ್ ಕಿರಣ್ ರಂಗಮಂಟಪದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ರಾಜ್ಯ ಸಚಿವರುಗಳಾದ ಕೋಟ ಶ್ರೀನಿವಾಸ್ ಪೂಜಾರಿ, ಕಾರ್ಕಳ ಸುನೀಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಡಾ. ಚಂದ್ರಶೇಖರ್, ಮಾತ್‌ಋ ವಿದ್ಯಾಸಂಸ್ಥೆಯ ಪ್ರಾಂಶುಪಾಲ ರಾಮಕೃಷ್ಣ ಪೈ, ಉಪ ಪ್ರಾಂಶುಪಾಲೆ ಒಲ್ವೀಟಾ ಡಿಸೋಜ, ಗ್ರಾ.ಪಂ.ಅಧ್ಯಕ್ಷ ಕಸ್ತೂರಿ ಉಪಸ್ಥಿತರಿದ್ದರು

Related Posts

Leave a Reply

Your email address will not be published.