ಅರಸೀಕೆರೆಯಲ್ಲಿ ರೌಡಿಶೀಟರ್‌ನ ಬರ್ಬರ ಹತ್ಯೆ

ಹಾಸನ: ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ. ನವಾಜ್ (27) ಕೊಲೆಯಾದ ರೌಡಿಶೀಟರ್. ಹಾಸನ ಜಿಲ್ಲೆಯ ಅರಸೀಕೆರೆ ನಗರದ ಹೊರವಲಯದ ಚಿಕ್ಕತಿರುಪತಿ ರಸ್ತೆಯ ಕಾರೆಹಳ್ಳಿ ಸಮೀಪ ನಡೆದಿದೆ. ಮೂರು ವರ್ಷಗಳ ಹಿಂದೆ ಮೀನು ಹಿಡಿಯುವ ಸಂಬಂಧ ಎರಡು ಯುವಕರ ತಂಡದ ನಡುವೆ ಗಲಾಟೆ ನಡೆದು ಕೊನೆಗೆ ಆಂಬುಲೆನ್ಸ್ ಚಾಲಕ ಅರುಣ್ ಎಂಬುವನನ್ನು ಅರಸೀಕೆರೆ ನಗರದ ಹೃದಯಭಾಗದಲ್ಲಿರುವ ಅಂಬೇಡ್ಕರ್ ವೃತ್ತದ ಬಳಿ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದರು. ಆ ಕೊಲೆ ಪ್ರಕರಣದಲ್ಲಿ ನವಾಜ್ ಕೂಡಾ ಭಾಗಿಯಾಗಿದ್ದ. ಜೈಲಿನಲ್ಲಿದ್ದ ಈತ ಇತ್ತೀಚೆಗಷ್ಟೇ ಜಾಮೀನು ಪಡೆದು ನಗರದಲ್ಲಿ ಮತ್ತೆ ಕೆಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಅರುಣ್ ಕಡೆಯ ಹುಡುಗರೆ ಈತನ ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಅರಸೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

 

 

Related Posts

Leave a Reply

Your email address will not be published.