ಆಲೂರಿನಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ

ಹಾಸನ ತಾಲೂಕು ಕಾನೂನು ಸೇವಾ ಸಮಿತಿ ಆಲೂರು, ವಕೀಲರ ಸಂಘ ಆಲೂರು ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಲೂರು ತಾಲೂಕು ಜೆಎಂಎಫ್ಸಿ ನ್ಯಾಯಾಧೀಶರಾದ ಪ್ರತಿಮಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು.

ಆಲೂರು ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾಲೂಕು ಜೆಎಂಎಫ್ಸಿ ನ್ಯಾಯಾಧೀಶರಾದ ಪ್ರತಿಮಾ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಕಾನೂನಿನ ಅರಿವಿನ ಬಗ್ಗೆ ಸಮುದಾಯದವರಿಗೆ ಹಾಗೂ ಹಳ್ಳಿಯ ಭಾಗದ ಜನರಿಗೆ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರಿಗೆ ಯಾವ ರೀತಿ ಕಾನೂನು ಅಡಿಯಲ್ಲಿ ದೌರ್ಜನ್ಯ ಮಾಡಿದ ವ್ಯಕ್ತಿಗಳಿಗೆ ಯಾವ ಯಾವ ಶಿಕ್ಷೆ ಇದೆ ಎಷ್ಟು ವರ್ಷ ಶಿಕ್ಷೆ ಆಗಬಹುದುಮಾಜಿ ಆಯುಷ್ ವೈದೆ ಅಧಿಕಾರಿಗಳಾದ ನೀಲಾ ರವರು ಮಾತನಾಡಿ, ಸಮತೋಲನ ಆಹಾರದ ಬಗ್ಗೆ ಮಹಿಳೆಯರಿಗೆ ಗೃಹಿಣಿಯರಿಗೆ ಮತ್ತು ಮಕ್ಕಳಿಗೆ ಯಾವ ಯಾವ ಸಮಯದಲ್ಲಿ ಯಾವ ಯಾವ ರೀತಿ ಆಹಾರ ಪದಾರ್ಥಗಳನ್ನು ಸೇವಿಸಬೇಕು ಇದರಿಂದ ಯಾವ ರೀತಿ ಪೌಷ್ಟಿಕಾಂಶ ದೊರೆಯುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಮಂಜೇ ಗೌಡ್ರುಹಾಸನ ಜಿಲ್ಲಾ ಆಯುಷ್ ಅಧಿಕಾರಿ ವೀಣಾ ಲತಾ ರವರು, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ವೇದ ಸುರೇಶ್ ಅವರು ನಾರಾಯಣ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲೇಶ್ ರವರು,ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.