ಎಲ್ಲೂರಿನಲ್ಲಿ ಬಾವಿ ಕುಸಿತ: ಮೂರು ಲಕ್ಷಕ್ಕೂ ಅಧಿಕ ನಷ್ಟ
ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾನಿಯೂರಿನಲ್ಲಿ ಭಾರೀ ಮಳೆಗೆ ಕುಡಿಯುವ ನೀರಿನ ಬಾವಿಯೊಂದು ಪಂಪ್ ಸೆಟ್ಟ್ ಸಹಿತ ಕುಸಿದು ಸುಮಾರು ಮೂರು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.
ಮಾನಿಯೂರಿನ ಗಣೇಶ್ ಮೂಲ್ಯ ಎಂಬವರಿಗೆ ಸೇರಿದ ಕಲ್ಲು ಕಟ್ಟಿದ್ದ ಬಾವಿ ಗುರುವಾರ ಕುಸಿತ ಕಂಡಿದ್ದು, ಸ್ಥಳಕ್ಕೆ ಎಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಂತ್ ಕುಮಾರ್ ಆಗಮಿಸಿ ಪರಿಶೀಲನೆ ಮಾಡಿದ್ದು, ಪ್ರಕೃತಿ ವಿಕೋಪದಡಿ ಸರ್ಕಾರದಿಂದ ಸಂತ್ರಸ್ಥರಿಗೆ ಪರಿಹಾರ ನೀಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ.