ಎಸೆಸೆಲ್ಸಿ ಫಲಿತಾಂಶ: ಬಂಟ್ವಾಳದ ಎನ್. ಪ್ರತೀಕ್ ಮಲ್ಯ ಪೂರ್ಣ ಅಂಕ

ಬಂಟ್ವಾಳ: ಬಂಟ್ವಾಳ ಪೇಟೆಯಲ್ಲಿರುವ ಎಸ್‌ವಿಎಸ್ ದೇವಳ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ 625 ಅಂಕ ಪಡೆದುಕೊಂಡು ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ.

ಇಲ್ಲಿನ ತ್ಯಾಗರಸ್ತೆಯ ನಿವಾಸಿ ಎನ್. ವೆಂಕಟೇಶ್ ಮಲ್ಯ ಹಾಗೂ ಎನ್.ರಾಧಿಕ ಮಲ್ಯ ಅವರ ಪುತ್ರರಾಗಿರುವ ಪ್ರತೀಕ್ ಮುಂದೆ ಉದ್ಯಮಿಯಾಗುವ ಗುರಿ ಹೊಂದಿದ್ದಾರೆ. ತನ್ನ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ, ಪೋಷಕರು, ಮನೆಯವರ ಬೆಂಬಲವೇ ಕಾರಣವಾಗಿದೆ ಎಂದಿರುವ ಅವರು ಮುಂದೆ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕಲಿಯುವ ಆಸಕ್ತಿ ಹೊಂದಿದ್ದಾರೆ.ಕರೋನಾ ಲಾಕ್‌ಡೌನ್‌ನಿಂದಾಗಿ ಭೌತಿಕ ತರಗತಿಗಳು ಇಲ್ಲದಿದ್ದರೂ ಪ್ರತೀಕ್ ಅವರ ತಾಯಿ ರಾಧಿಕ ಮಲ್ಯ ಟ್ಯೂಷನ್ ಶಿಕ್ಷಕಿಯಾಗಿದ್ದು ಅವರ ಮೂಲಕವೇ ಹೆಚ್ಚಿನ ತರಬೇತಿಯನ್ನು ಪಡೆದುಕೊಂಡಿದ್ದರು. ಇವರ ತಮ್ಮ ಹಾಗೂ ತಂಗಿ ಎಸ್‌ವಿಎಸ್ ದೇವಾಳ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

 

Related Posts

Leave a Reply

Your email address will not be published.