Home Posts tagged #sslc result

ಮಂಗಳೂರು ಅಮೃತಾ ವಿದ್ಯಾಲಯಂ ಶಾಲೆಗೆ ಶೇ.100 ಫಲಿತಾಂಶ

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಮಂಗಳೂರಿನ ಅಮೃತಾ ವಿದ್ಯಾಲಯಂನ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿದ್ದಾರೆ. ದೇವಿಕಾ ಜಯರಾಜ್ ಶೇ.96.80 ಪ್ರಥಮ, ಅದಿತೇಯ ಶೇ.93.4 ದ್ವಿತೀಯ, ಸುಮೇದಾ ಶೇ. 92.6 ತೃತಿಯಾ, ರಿಯಾ ಸಿಂಗ್ ಶೇ.91 ಚತುರ್ಥ ಸ್ಥಾನ ಪಡೆದಿದ್ದಾರೆ. ಮೂವರು ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು. ಎಂಟು ವಿದ್ಯಾರ್ಥಿಗಳು ಶೇ.85ಕ್ಕಿಂತ

SSLC – ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

ಮಂಗಳೂರಿನ ಬಂಟರಯಾನೆ ನಾಡವರ ಮಾತೃಸಂಘದ ವತಿಯಿಂದ ನಡೆಸಲ್ಪಡುವ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ 59 ವಿದ್ಯಾರ್ಥಿಗಳಲ್ಲಿ 14 ವಿಶಿಷ್ಟ ಶ್ರೇಣಿ, 33 ಪ್ರಥಮ ಶ್ರೇಣಿ, 10 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇಕಡಾ 97 ಫಲಿತಾಂಶದೊಂದಿಗೆ ಶಾಲೆಯು A ಶ್ರೇಣಿಯನ್ನು ಪಡೆದುಕೊಂಡಿದೆ. ಶಾಲೆಯ ತ್ರಿಶಾ.ಎಸ್ ವಿದ್ಯಾರ್ಥಿನಿ 625ರಲ್ಲಿ 620 ಅಂಕ ಗಳಿಸಿ ರಾಜ್ಯಕ್ಕೆ 6ನೇ ಸ್ಥಾನವನ್ನು ಪಡೆದಿರುತ್ತಾಳೆ.

ಮೂಡುಬಿದಿರೆ: SSLC ಫಲಿತಾಂಶ -ರೋಟರಿ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ

ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೋಟರಿ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ರೋಟರಿ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶವನ್ನು ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 41 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 67 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ ಒರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಚಿತಾ ಎಸ್. ಸುವರ್ಣ 613

ಮಂಗಳೂರು : SSLC ಫಲಿತಾಂಶ – ಬಿ.ಜಿ.ಎಸ್. ವಿದ್ಯಾರ್ಥಿ ಮಹಿತ್ ಕುಮಾರ್ ಗೆ 607 ಅಂಕ

ಮಂಗಳೂರು : ಕಾವೂರಿನ ಬಿ.ಜಿ.ಎಸ್. ಹೈಸ್ಕೂಲ್ ವಿದ್ಯಾರ್ಥಿ ಮಹಿತ್ ಕುಮಾರ್ ಈ ಬಾರಿಯ SSLC ಪರೀಕ್ಷೆಯಲ್ಲಿ 607 ಅಂಕ ಪಡೆದು 97.12 % ದಾಖಲೆಯ ಸಾಧನೆ ಮಾಡಿದ್ದಾನೆ. ‌ ಬಿ.ಜಿ.ಎಸ್. ಶಾಲೆಯ ಗರಿಷ್ಠ ಅಂಕ ಪಡೆದ ಟಾಪರ್ ವಿದ್ಯಾರ್ಥಿಯಾಗಿರುವ ಮಹಿತ್ ಕುಮಾರ್ ಅವರು ಭಾಸ್ಕರ್ ಗಟ್ಟಿ ಕೌಡೂರು ಹಾಗೂ ಸೌಮ್ಯ ಗಟ್ಟಿ ನಡಾರ್ ಇವರ ಪುತ್ರ. ಗರಿಷ್ಠ ಅಂಕದೊಂದಿಗೆ ಶಾಲೆಗೆ ಕೀರ್ತಿ ತಂದ ಸಾಧನೆ ಮಾಡಿದ ಮಹಿತ್ ಅವರನ್ನು ಶಾಲಾಡಳಿತ ಮಂಡಳಿ ಅಭಿನಂದಿಸಿದೆ.

2023-24ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟ – ಉಡುಪಿ ಪ್ರಥಮ, ದ.ಕ. ದ್ವಿತೀಯ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ. 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಹಾಗೂ ನಿರ್ದೇಶಕ ಗೋಪಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶದ ಮಾಹಿತಿ ನೀಡಿದರು. ಈ ಬಾರಿಯ ಫಲಿತಾಂಶ

ಮೇ 9ರಂದು ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟ

2023-24ನೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮೇ 9ರಂದು ಪ್ರಕಟಗೊಳ್ಳಲಿದೆ. ಮಾರ್ಚ್ 25 ರಿಂದ ಎಪ್ರಿಲ್ 06ರವರೆಗೆ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈಗ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.

ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ : SSLC ಪರೀಕ್ಷೆಯಲ್ಲಿ ಸತತ 20ನೇ ಬಾರಿ 100% ಫಲಿತಾಂಶ

ಸತತ ನೂರು ಶೇ. ಸಾಧನೆಯ ಪ್ರತಿಷ್ಠಿತ ಶಾಲೆ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬಸವನ ಗುಡಿ ವಿಟ್ಲ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿಟ್ಲ 2023ರ SSLC ಪರೀಕ್ಷೆಯಲ್ಲಿ ಸತತ 20ನೇ ಬಾರಿ 100% ಫಲಿತಾಂಶ. ತಸ್ಮಯಿ ಯಸ್ ಶೆಟ್ಟಿ 616 ಹಾಗೂ ಸಾತ್ವಿಕ್ ಕೃಷ್ಣ ಕೆ. ಯನ್ 614 ಅಂಕ ಹಾಜರಾದ 91 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚು ಅಂಕ ಗಳಿಕೆ 37 ವಿದ್ಯಾರ್ಥಿಗಳು A+, 29ವಿದ್ಯಾರ್ಥಿಗಳು – […]

ಆಳ್ವಾಸ್ ವಿದ್ಯಾರ್ಥಿ ಗಣೇಶ್ ಎಸ್‌ ಎಸ್‌ ಎಲ್‌ ಸಿಯಲ್ಲಿ ಟಾಪರ್

ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಣೇಶ್ ಹನುಮಂತಪ್ಪ ವೀರಪುರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಮೂಲತಃ ಬಾಗಲಕೋಟೆಯ ಇಳಕಲ್ಲ್‌ನ ಗಣೇಶ್, ಆಳ್ವಾಸ್‌ನ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿ ಕಳೆದ 5 ವರ್ಷದಿಂದ ಉಚಿತ ಶಿಕ್ಷಣ ಪಡೆಯುತ್ತಿದ್ದಾನೆ. ಈತ ಹನುಮಂತಪ್ಪ-ಯಶೋಧ ದಂಪತಿಯ ಪುತ್ರ. 625  ಅಂಕದ ನಿರೀಕ್ಷೆ ಇರಲಿಲ್ಲ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ.

ಎಸೆಸೆಲ್ಸಿ ಫಲಿತಾಂಶ: ಬಂಟ್ವಾಳದ ಎನ್. ಪ್ರತೀಕ್ ಮಲ್ಯ ಪೂರ್ಣ ಅಂಕ

ಬಂಟ್ವಾಳ: ಬಂಟ್ವಾಳ ಪೇಟೆಯಲ್ಲಿರುವ ಎಸ್‌ವಿಎಸ್ ದೇವಳ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಎನ್.ಪ್ರತೀಕ್ ಮಲ್ಯ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ 625 ಅಂಕ ಪಡೆದುಕೊಂಡು ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾನೆ. ಇಲ್ಲಿನ ತ್ಯಾಗರಸ್ತೆಯ ನಿವಾಸಿ ಎನ್. ವೆಂಕಟೇಶ್ ಮಲ್ಯ ಹಾಗೂ ಎನ್.ರಾಧಿಕ ಮಲ್ಯ ಅವರ ಪುತ್ರರಾಗಿರುವ ಪ್ರತೀಕ್ ಮುಂದೆ ಉದ್ಯಮಿಯಾಗುವ ಗುರಿ ಹೊಂದಿದ್ದಾರೆ. ತನ್ನ ಸಾಧನೆಗೆ ಶಿಕ್ಷಕರ ಪ್ರೋತ್ಸಾಹ, ಪೋಷಕರು, ಮನೆಯವರ ಬೆಂಬಲವೇ

ಎಸ್ ಎಸ್ ಎಲ್ ಸಿ ಫಲಿತಾಂಶ: ಪುತ್ತೂರಿನ ಬೆಥನಿ ಸ್ಕೂಲ್ ನ ತನಿಶಾ ರೈ ರಾಜ್ಯಕ್ಕೆ ಪ್ರಥಮ

ಪುತ್ತೂರು: ಎಸ್ ಎಸ್ ಎಲ್. ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಬೆಥನಿ ಪ್ರೌಢಶಾಲಾ ವಿದ್ಯಾರ್ಥಿನಿ ತನಿಶಾ ರೈ 625 ರಲ್ಲಿ 625 ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.ಇವರು ಸಂಪ್ಯದ ಪ್ರಸನ್ನ ಕುಮಾರ್ ರೈ,ಜ್ಯೋತಿ ಪಿ ರೈ ದಂಪತಿ ಪುತ್ರಿಯಾಗಿದ್ದಾಳೆ.