ಕಾಪುವಿನಲ್ಲಿ ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ

ರಾಜ್ಯ ಸರಕಾರದ ಧರ್ಮ ವಿರೋಧಿ ಮತ್ತು ಕೇಂದ್ರ ಸರಕಾರದ ಕೃಷಿ ವಿರೋಧಿ ಹಾಗೂ ಬೆಲೆ ಏರಿಕೆ ಮತ್ತು ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪುವಿನ ಶ್ರೀ ಜನಾರ್ದನ ದೇವಸ್ಥಾನದ ಎದುರಿನಿಂದ ಪೇಟೆಯವರೆಗೆ ಸಂಜೆ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಐತಿಹಾಸಿಕ ದೇವಸ್ಥಾನಗಳನ್ನು ಒಡೆಯುವುದರೊಂದಿಗೆ ಭ್ರಷ್ಟಾಚಾರ, ಅವ್ಯವಹಾರ, ಅತ್ಯಾಚಾರಗಳಲ್ಲಿ ಭಾಗಿಯಾಗುತ್ತಿರುವುದು ಬಿಜೆಪಿಗರ ದೊಡ್ಡ ಸಾಧನೆಯಾಗಿದೆ. ಹಿಂದಿನ ವರ್ಷಗಳಲ್ಲಿ ಬೆಲೆಯೇರಿಕೆಯಾದ ಕೂಡಲೇ ರಸ್ತೆಯಲ್ಲಿ ಹೊರಳಾಡುತ್ತಿದ್ದ ಬಿಜೆಪಿ ಮುಖಂಡರು ಇಂದು ಕೋರೋನಾದ ಸಂಕಷ್ಠ ಕಾಲದಲ್ಲಿ ಬೆಲೆಯೇರಿಕೆಯಿಂದಾಗಿ ಜನ ಬೀದಿಗೆ ಬೀಳುತ್ತಿದ್ದರೂ ಸುಮ್ಮನಾಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಹೇಳಿದರು.ಕೆಪಿಸಿಸಿ ಮುಖಂಡರಾದ ನವೀನ್ ಚಂದ್ರ ಜೆ. ಶೆಟ್ಟಿ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಡ್ವೆ, ಪಕ್ಷದ ಮುಖಂಡರಾದ ದೀಪಕ್ ಕೋಟ್ಯಾನ್ ಇನ್ನ, ಶರ್ಫುದ್ದೀನ್ ಶೇಖ್, ರಮೀಜ್ ಹುಸೈನ್, ರಮೇಶ್ ಕಾಂಚನ್, ವಿನಯ ಬಲ್ಲಾಳ್, ಅಖಿಲೇಶ್ ಕೋಟ್ಯಾನ್, ಗೀತಾ ವಾಗ್ಲೆ, ರಾಜೇಶ್ ರಾವ್ ಪಾಂಗಾಳ, ಶಿವಾಜಿ ಸುವರ್ಣ ಬೆಳ್ಳೆ, ಸರಸು ಬಂಗೇರಾ, ವಿಲ್ಸನ್ ರೋಡ್ರಿಗ್ರಸ್, ಜ್ಯೋತಿ ಮೆನನ್, ಯು.ಸಿ. ಶೇಖಬ್ಬ, ಮೈಕಲ್ ರಮೇಶ್ ಡಿ ಸೋಜ, ಸೌರಭ್ ಬಲ್ಲಾಳ್, ದಿನೇಶ್ ಕೋಟ್ಯಾನ್ ಪಲಿಮಾರ್, ನವೀನ್ ಎನ್. ಶೆಟ್ಟಿ, ಹರೀಶ್ ನಾಯಕ್, ಐಡಾ ಗಿಬ್ಬಾ ಡಿ.ಸೋಜ,ನಾಗೇಶ್ ಕುಮಾರ್ ಉದ್ಯಾವರ, ಪ್ರಭಾಕರ್ ಆಚಾರ್ಯ, ಕೇಶವ ಹೆಜಮಾಡಿ, ವಿಕ್ರಮ್ ಕಾಪು, ಪ್ರಭಾಕರ ಪೂಜಾರಿ, ಮೆಲ್ವಿನ್ ಡಿ ಸೋಜ, ಅಬ್ದುಲ್ ಅಜೀಜ್ ಮೊದಲಾದವರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.