ಕುಂದಾಪುರದ ನೆರೆಪೀಡಿತ ಪ್ರದೇಶಗಳಿಗೆ ದೋಣಿ ವ್ಯವಸ್ಥೆ..!
ಕುಂದಾಪುರದ ಬೈಂದೂರು ತಾಲೂಕು ನೆರೆ ಪೀಡಿತ ಪ್ರದೇಶಗಳಾದ ನಾಡ, ಮರವಂತೆ, ಬಡಾಕೆರೆ ಮತ್ತು ಹೇರೂರು ಗ್ರಾಮ ಪಂಚಾಯಿತಿಗಳಿಗೆ ದೋಣಿಯನ್ನು ಜಿಲ್ಲಾಡಳಿತದಿಂದ ಹಸ್ತಾಂತರಿಸಿದ್ರು.
ಕುಂದಾಪುರದ ಬೈಂದೂರು ತಾಲೂಕಿನ ಪ್ರದೇಶದಲ್ಲಿ 5 ಕಡೆಗಳಲ್ಲಿ ಪ್ರಾಕೃತಿವಿಕೋಪದಿಂದ ಸಾಕಷ್ಟು ತೊಂದರೆ ಆಗಿದ್ದು, ಅಲ್ಲಿನ ಸಮಸ್ಯೆಗಳ ಕುರಿತು ವಿ೪ನ್ಯೂಸ್ ವಿಸ್ಕೃತವಾಗಿ ವರದಿ ಮಾಡಿತ್ತು. ಈ ವರದಿಗೆ ಎಚ್ಚೆತ್ತುಕೊಂಡು, ನೆರೆ ಪೀಡಿತ ಪ್ರದೇಶಗಳಾದ ನಾಡ, ಮರವಂತೆ, ಬಡಾಕೆರೆ ಮತ್ತು ಹೇರೂರು ಗ್ರಾಮ ಪಂಚಾಯಿತಿಗಳಿಗೆ ದೋಣಿಯನ್ನು ಜಿಲ್ಲಾಡಳಿತದಿಂದ ನೀಡಲಾಗಿದ್ದು,ಇಂದು ತಹಶೀಲ್ದಾರ್ ರಾದ ಶೋಭಲಕ್ಶ್ಮಿಯವರು ಆಯಾ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಧೋಣಿಯನ್ನು ಹಸ್ತಾಂತರಿಸಿದ್ರು.
ಈ ವೇಳೆ ಮಾತನಾಡಿದ ಅವರು, ಜಿಲ್ಲಾಡಳಿತ ವತಿಯಿಂದ ನೀಡಲಾಗುತ್ತಿರುವ ದೋಣಿ ಪ್ರಕೃತಿ ವಿಕೋಪದ ನೆರೆಹಾವಳಿ ಸಂದರ್ಭದಲ್ಲಿ ಅನೂಕೂಲವಾಗಲಿ ಎಂಬ ನಿಟ್ಟಿನಲ್ಲಿ ನೀಡುತ್ತಿದ್ದೇವೆ. ದೋಣಿಯು ದುರುಪಯೋಗ ಆಗದೆ ತುರ್ತು ಸಂದರ್ಭದಲ್ಲಿ ಮಾತ್ರ ಬಳಸಬೇಕು ಹಾಗೂ ದೋಣಿಯ ನಿರ್ವಾಹಣೆ ಮತ್ತು ಉಸ್ತುವಾರಿಯನ್ನು ಆಯಾ ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ ಎಂದರು.