ಕೋವಿಡ್ ಸೂಕ್ಷ್ಮ ನಡವಳಿಕೆ ಮತ್ತು ಲಸಿಕೆಯ ಕುರಿತು ಮಾಹಿತಿ
ಸ್ವಚ್ಛ ಭಾರತ್ ಮಿಷನ್ (ಗ್ರಾ) ವತಿಯಿಂದ ಸಾಹಸ್, ಐಐಎಚ್‌ಎಂಆರ್ ಬೆಂಗಳೂರು, ಯುನಿಸೆಫ್ ಸಹಯೋಗದಲ್ಲಿಆಶಾ ಕಾರ್ಯಕರ್ತೆಯರಿಗೆ ಕೋವಿಡ್ -19 ಸೂಕ್ಷ್ಮ ನಡವಳಿಕೆ ಮತ್ತು ಲಸಿಕೆಯ ಕುರಿತು ಮಾಹಿತಿ,ಶಿಕ್ಷಣ ಹಾಗೂ ಸಂವಹನ ಕಾರ್ಯಾಗಾರವನ್ನು ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಅವರು ಆಶಾ ಕಾರ್ಯಕರ್ತೆಯರಿಗೆ Menstrual Cup ವಿತರಿಸುವ ಮೂಲಕ ಚಾಲನೆ ನೀಡಿದರು.
ಕೋವಿಡ್ -೧೯ ಆರಂಭಿಕ ಸಮಯದಲ್ಲಿ ಲಸಿಕೆ ಬಗ್ಗೆ ಜನರಿಗೆ ಹಿಂಜರಿಕೆ ಇತ್ತು. ಪ್ರಸ್ತತ ಜನರು ಲಸಿಕೆಗಾಗಿ ಮುಂದೆ ಬಂದು ಹಾಕಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಒಮಿಕ್ರಾನ್ ಸಂದರ್ಭದಲ್ಲಿ ನಾವು ವಹಿಸಿದ ಎಚ್ಚರಿಕೆ ಎಲ್ಲರಿಗೂ ತಿಳಿದಿದೆ. ನಾವು ದೈನಂದಿನ ಜೀವನದಲ್ಲಿ ನೈರ್ಮಲ್ಯ ಹಾಗೂ ಶುಚಿತ್ವದ ಬಗ್ಗೆ ಕಾಳಜಿ ವಹಿಸಬೇಕು. ಆಗ ಈ ರೀತಿಯ ವೈರಾಣುಗಳಿಂದ ನಾವು ನಾವು ಜಾಗರೂಕರಾಗಿ ಇರಬಹುದು ಎಂದರು.
ಆಶಾ ಕಾರ್ಯಕರ್ತೆಯರು ಕೋವಿಡ್ -19 ವೇಳೆ ಉತ್ತಮವಾಗಿ ಕೆಲಸ ನಿರ್ವಹಿಸಿದ್ದು ಒಮಿಕ್ರಾನ್ ಕುರಿತು ಹೆಚ್ಚಿನಮಟ್ಟಿನ ಜಾಗೃತಿ ಮೂಡಿಸಬೇಕು ಎಂದರು.
ಋತುಚಕ್ರ ನಿರ್ವಹಣೆ ಕುರಿತು ಸಾಹಸ್ ಸಂಸ್ಥೆಯ ರಾಧಿಕಾ ಮಾಹಿತಿ ನೀಡಿದರು. ಕೋವಿಡ್ ಲಸಿಕೆ, ಸೂಕ್ಷ್ಮ ನಡವಳಿಕೆ ಮತ್ತು ಲಸಿಕೆಯ ಕುರಿತು ಯುನಿಸೆಪ್ ಸಂಸ್ಥೆಯ ವಿಜಯ್ ಕುಮಾರ್ ಮಾಹಿತಿ ನೀಡಿದರು.
ಮಂಗಳೂರು ತಾಲೂಕು ಪಂಚಾಯತ್ ಮಾನೇಜರ್ ಸುವರ್ಣ ಹೆಗಡೆ, ಸ್ವಚ್ಚ ಭಾರತ್ ಮಿಷನ್ (ಗ್ರಾ) ಸಂಯೋಜಕ ನವೀನ್, ಸಾಹಸ್ ಸಂಸ್ಥೆಯ ಪ್ರಾಜೆಕ್ಟ್ ಸಂಯೋಜಕ ಸುದೇಶ್ ಕಿಣಿ ಇದ್ದರು.ಡೊಂಬಯ್ಯ ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು.