ಗೊನ್ಝಾಗ ಶಾಲೆಯ ಹೊಸ ಶೈಕ್ಷಣಿಕ ವರ್ಷದ ಉದ್ಘಾಟನೆ
ಸಂತ ಎಲೋಶಿಯಸ್ ಗೊನ್ಝಾಗ ಶಾಲೆಯ 2021-22ನೇ ಸಾಲಿನ ಹೊಸ ಶೈಕ್ಷಣಿಕ ವರ್ಷದ ಉದ್ಘಾಟನೆಯು ಅಂತರ್ಜಾಲ ಮುಖಾಂತರ ನಡೆಯಿತು. ಉದ್ಘಾಟಿಸಿ ಮಾತನಾಡಿದ ಸಂತ ಅಲೋಶಿಯಸ್ ಸಮೂಹ ಸಂಸ್ಥೆಯ ರೆಕ್ಟರ್ ವಂ. ಫಾ. ಮೆಲ್ವಿನ್ ಪಿಂಟೊ ಎಸ್.ಜೆ.ಅವರು ‘ಆದ್ಯತೆಯ ಮೇರೆಗೆ ಇಡೀ ದಿನದ ವೇಳಾಪಟ್ಟಿ ತಯಾರಿಸುವುದು ಹಾಗೂ ಸೃಜನಶೀಲತೆಯನ್ನು ಬೆಳೆಸುವಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಪ್ರಚಲಿತ ಸನ್ನಿವೇಶವನ್ನು ಸಮರ್ಥವಾಗಿ ಹೇಗೆ ಎದುರಿಸಬಹುದು’ ಎಂಬ ಬಗ್ಗೆ ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ವಂ.ಫಾ. ಮೆಲ್ವಿನ್ ಅನಿಲ್ ಲೋಬೋ ಎಸ್.ಜೆ ಅವರು ಸಂಸ್ಕೃತ ಶ್ಲೋಕವೊಂದನ್ನು ಉದ್ಧರಿಸಿ ಯಶಸ್ವಿ ವಿದ್ಯಾರ್ಥಿಯ ಐದು ಗುಣಲಕ್ಷಣಗಳ ಬಗ್ಗೆ ವಿವರಿಸಿದರು. ಸಂಪೂರ್ಣ ಪ್ರಯತ್ನ ಮಾಡು, ಗುರಿಯೆಡೆಗೆ ಲಕ್ಷ್ಯವಿಡು, ಸದಾ ಎಚ್ಚರದಿಂದಿರು, ಕುತೂಹಲ ಸ್ವಭಾವವನ್ನು ಹೊಂದಿರು, ಜೀವನದಲ್ಲಿ ಧನಾತ್ಮಕ ಮನೋಭಾವ ಇರಲಿ ಹಾಗೂ ಸುರಕ್ಷಿತ ವಲಯದಿಂದ ಹೊರಗೆ ಬರುವಂತೆ ಕರೆ ನೀಡಿದರು.ಸಭೆಯಲ್ಲಿ ಭಾಗವಹಿಸಿದ ಪೋಷಕರು, ಶಿಕ್ಷಕ ವರ್ಗ, ಹಾಗೂ ವಿದ್ಯಾರ್ಥಿಗಳನ್ನು ಉಪ ಪ್ರಾಂಶುಪಾಲೆ ಶ್ರೀಮತಿ ಲಾರೆಲ್ ಡಿ’ಸೋಜಾ ಸ್ವಾಗತಿಸಿದರು.ಶ್ರೀಮತಿ ಗ್ಲೋರಿಯಾ ಮಿಸ್ಕಿತ್ ನೇತೃತ್ವದಲ್ಲಿ ಪ್ರಾರ್ಥನೆ ಗೀತೆ ಹಾಡಲಾಯಿತು. ಶ್ರೀಮತಿ ಅಪರ್ಣ ಸುರೇಶ್ ಧನ್ಯವಾದ ಹೇಳಿದರು. ಶ್ರೀಮತಿ ವಿದ್ಯಾ ಎಸ್ತರ್ ಕಾರ್ಯಕ್ರಮವನ್ನು ನಿರೂಪಿಸಿದರು.