ಚೆಲುವಿನ ಚುಲುಬುಲೀಸ್ ಮಹಿಳೆಯರಿಂದ ದಾಂಡಿಯಾ ಸಂಭ್ರಮ
ಕೊರೊನಾ ಕಾರಣದಿಂದಾಗಿ ಅದೆಷ್ಟೋ ಮಂದಿ ಕಳೆದ ಎರಡು ವರ್ಷಗಳಿಂದ ಮನೆಯ ಹೊರಗಿನ ಆಯೋಜನೆಯ ಸಾಂಸ್ಕøತಿಕ ಕಾರ್ಯಕ್ರಮ , ಸಂಭ್ರಮದಿಂದ ವಂಚಿತರಾಗಿದ್ದರು. ಇದೀಗ ಮತ್ತೆ ಸನ್ನಿವೇಶವು ಸಹಜ ಸ್ಥಿತಿಗೆ ಬರುತ್ತಿದ್ದು, ಸಾಂಸ್ಕøತಿಕ ಕಲರವ ಸಂಭ್ರಮ ಕಾಣಿಸಿಕೊಳ್ಳುತ್ತಿದೆ.
ಬೆಂಗಳೂರಿನ ಚೆಲುವಿನ ಚುಲುಬುಲೀಸ್ ಮಹಿಳಾ ತಂಡದವರು ಖ್ಯಾತ ಡಿಸೈನರ್ ಹಾಗೂ ಮೋಡೆಲ್ ಪ್ರಿಯಾ ಕುಮಾರ್ ನೇತೃತ್ವದಲ್ಲಿ ದಾಂಡಿಯಾ ನೃತ್ಯ ಆಯೋಜನೆಯ ಮೂಲಕ ನವರಾತ್ರಿಯವನ್ನು ಸಂಭ್ರಮದಿಂದ ಬರಮಾಡಿಕೊಂಡರು. ಕಿರಿಯರಿಂದ ಹಿರಿಯರ ತನಕದ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು.
ಎರಡು ವರ್ಷಗಳಿಂದ ಮನೆಯಲ್ಲಿದ್ದ ನಮಗೆ ಈ ಸಹಮಿಲನ ಕಾರ್ಯಕ್ರಮವು ಸಂಭ್ರಮವನ್ನು ಹಂಚಿಕೊಳ್ಳಲು ಒಳ್ಳೆಯ ಅವಕಾಶವಾಯಿತು ಎಂದು ಮಹಿಳೆಯರು ಅಭಿಪ್ರಾಯ ಹಂಚಿಕೊಂಡರು.